ಸಾರಾಂಶ
ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಡರಾತ್ರಿ, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ತೆರಿಗೆ ಹೇರಿಕೆಗೆ ಒಳಪಟ್ಟ ದೇಶಗಳ ಮೇಲೆ ಒತ್ತಡ ಹೇರಲು ಟ್ರಂಪ್ ರೂಪಿಸಿದ ರಣತಂತ್ರ ಇರಬಹುದು ಎಂದು ವಿಶ್ಲೇಷಿಸಲಾಗಿದೆ.
ವಿದೇಶಗಳ ಮೇಲೆ ಒತ್ತಡ । ಅಮೆರಿಕ ಅಧ್ಯಕ್ಷ ಟ್ರಂಪ್ ರಣತಂತ್ರ
ತೆರಿಗೆ ಹೊಡೆತದಿಂದ ಪಾರಾದ ದೇಶಗಳಲ್ಲಿ ಭಾರತಕ್ಕೂ ಸ್ಥಾನ?---
ವಾಷಿಂಗ್ಟನ್: ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ತಡರಾತ್ರಿ, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ತೆರಿಗೆ ಹೇರಿಕೆಗೆ ಒಳಪಟ್ಟ ದೇಶಗಳ ಮೇಲೆ ಒತ್ತಡ ಹೇರಲು ಟ್ರಂಪ್ ರೂಪಿಸಿದ ರಣತಂತ್ರ ಇರಬಹುದು ಎಂದು ವಿಶ್ಲೇಷಿಸಲಾಗಿದೆ.ಸದ್ಯಕ್ಕೆ ತೆರಿಗೆ ಹೊಡೆತದಿಂದ ಪಾರಾದ ದೇಶಗಳ ಹೆಸರನ್ನು ಟ್ರಂಪ್ ಹೇರಿಲ್ಲ. ಆದರೆ ಆ ದೇಶಗಳಲ್ಲಿ ಅಮೆರಿಕ ಜತೆ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ತೊಡಗಿದ್ದ ಭಾರತ ಕೂಡ ಇದೆ ಎಂದು ಭಾವಿಸಲಾಗಿದೆ. ಭಾರತದ ಮೇಲೆ ಟ್ರಂಪ್ ಶೇ.26 ತೆರಿಗೆ ಹೇರಿದ್ದರು.
‘ಅಮೆರಿಕ ತೆರಿಗೆ ಹೇರಿದ ಬಳಿಕ ಸುಮಾರು 75 ದೇಶಗಳು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಅಮೆರಿಕದ ಜತೆ ಸಂಧಾನಕ್ಕೆ ಆಗಮಿಸಿವೆ. ಹೀಗಾಗಿ ನಾನು ಅವುಗಳ ಮೇಲೆ 90 ದಿನ ತೆರಿಗೆ ಹೇರಿಕೆ ಮುಂದೂಡಲು ನಿರ್ಧರಿಸಿದ್ದೇನೆ. ಅವುಗಳ ಮೇಲೆ ಶೇ.10 ಮೂಲ ಆಮದು ತೆರಿಗೆ ಮಾತ್ರ ಮುಂದುವರಿಯಲಿದೆ. ಆದರೆ ಚೀನಾ ಮಾತ್ರ ಸುಮ್ಮನಿರದೇ ನಮ್ಮ ಮೇಲೆ ಪ್ರತಿತೆರಿಗೆ ಹೇರಿದೆ. ಹೀಗಾಗಿ ಚೀನಾ ಮೇಲಿನ ತೆರಿಗೆಯನ್ನು ಕೂಡಲೇ ಜಾರಿಗೆ ಬರುವಂತೆ ಶೇ.125ಕ್ಕೆ ಹೆಚ್ಚಿಸಿದ್ದೇನೆ’ ಎಂದು ತಮ್ಮ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.ಮೊನ್ನೆಯೇ ಅನುಮಾನವಿತ್ತು:
ಈ ರೀತಿ ಅವರು ತೆರಿಗೆಗೆ 90 ದಿನ ಬ್ರೇಕ್ ಹಾಕಲಿದ್ದಾರೆ ಎಂದು ಮೊನ್ನೆ ವರದಿಯಾಗಿತ್ತು. ಆದರೆ ಶ್ವೇತಭವನ ಅದನ್ನು ನಿರಾಕರಿಸಿತ್ತು. ಟ್ರಂಪ್ ಕೂಡ ತಾವು ತೆರಿಗೆಯಿಂದ ಹಿಂದೆ ಸರಿಯಲ್ಲ ಎಂದಿದ್ದರು. ಬಳಿಕ ಬುಧವಾರದಿಂದಲೇ ಅನ್ವಯ ಆಗುವಂತೆ ಪರಿಷ್ಕೃತ ತೆರಿಗೆಗಳು ವಿಶ್ವಾದ್ಯಂತ ಜಾರಿಗೆ ಬಂದಿದ್ದವು. ಇದರಿಂದ ವಿಶ್ವದ ಷೇರು ಮಾರುಕಟ್ಟೆಗಳು ಭಾರಿ ಪ್ರಮಾಣದಲ್ಲಿ ಕುಸಿದಿದ್ದವು. ಅಲ್ಲದೆ, ಚೀನಾ ಸಡ್ಡು ಹೊಡೆದು ಶೇ.84 ಪ್ರತಿತೆರಿಗೆ ಘೋಷಿಸಿದ್ದರಿಂದ ವಿಶ್ವದಲ್ಲಿ ವ್ಯಾಪಾರ ಕದನ ಆರಂಭವಾಗಿತ್ತು.--