ಭಾರತ ಭೇಟಿ ಮುಂದೂಡಿದ ಎಲಾನ್‌ ಮಸ್ಕ್‌ ದಿಢೀರ್‌ ಚೀನಾಕ್ಕೆ ಭೇಟಿ, ಮಾತುಕತೆ

| Published : Apr 29 2024, 01:42 AM IST / Updated: Apr 29 2024, 04:15 AM IST

ಭಾರತ ಭೇಟಿ ಮುಂದೂಡಿದ ಎಲಾನ್‌ ಮಸ್ಕ್‌ ದಿಢೀರ್‌ ಚೀನಾಕ್ಕೆ ಭೇಟಿ, ಮಾತುಕತೆ
Share this Article
  • FB
  • TW
  • Linkdin
  • Email

ಸಾರಾಂಶ

ಕಂಪನಿಯ ತುರ್ತು ಕಾರ್ಯಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಪ್ರವಾಸ ಮುಂದೂಡಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌, ಭಾನುವಾರ ದಿಢೀರ್‌ ಚೀನಾಕ್ಕೆ ಭೇಟಿ ನೀಡಿದರು

ಬೀಜಿಂಗ್‌: ಕಂಪನಿಯ ತುರ್ತು ಕಾರ್ಯಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಪ್ರವಾಸ ಮುಂದೂಡಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌, ಭಾನುವಾರ ದಿಢೀರ್‌ ಚೀನಾಕ್ಕೆ ಭೇಟಿ ನೀಡಿದರು. 

ಈ ವೇಳೆ ಅವರು ಚೀನಾ ಪ್ರಧಾನಿ ಲಿ ಕಿಯಾಂಗ್‌ ಅವರನ್ನು ಭೇಟಿ ಮಾಡಿ ಉದ್ಯಮ ವಿಸ್ತರಣೆಯ ಕುರಿತು ಮಾತುಕತೆ ನಡೆಸಿದ್ದಾರೆ. ಸ್ಥಳೀಯ ಆಟೋಮೊಬೈಲ್‌ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವಂತೆ ಬಂದಿದ್ದ ಆಹ್ವಾನದ ಹಿನ್ನೆಲೆಯಲ್ಲಿ ಮಸ್ಕ್‌ ಈ ದಿಢೀರ್‌ ಭೇಟಿ ನೀಡಿದ್ದಾರೆ. ಚೀನಾ, ಟೆಸ್ಲಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.