ಸಾರಾಂಶ
ಗಾಜಾ: ಕಳೆದ ವರ್ಷದ ಅ.7ರಂದು ಹಮಾಸ್ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ 1200 ಜನರನ್ನು ಬಲಿ ಪಡೆಯುವ ಘಟನೆಗೂ ಮುನ್ನ, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಸುರಂಗದೊಳಗೆ ಅಡಗಿದ್ದ ವಿಡಿಯೋವೊಂದನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದೆ.
ಸಿನ್ವರ್‌ನನ್ನು 3 ದಿನಗಳ ಹಿಂದಷ್ಟೇ ಇಸ್ರೇಲಿ ಸೇನೆ ಹತ್ಯೆ ಮಾಡಿತ್ತು. ಅದರ ಬೆನ್ನಲ್ಲೇ ಭಾನುವಾರ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಖಾನ್ ಯೂನಿಸ್ ಪ್ರದೇಶದ ಮನೆಯೊಂದರ ಕೆಳಗೆ ನಿರ್ಮಿಸಿದ್ದ ರಹಸ್ಯ ಸುರಂಗದೊಳಗೆ ಸಿನ್ವರ್, ತನ್ನ ತನ್ನ ಮಕ್ಕಳು, ಪತ್ನಿಯೊಂದಿಗೆ ಟೀವಿ, ಹಾಸಿಗೆ, ನೀರು, ದಿಂಬು, ಬ್ಯಾಗ್ ಹಿಡಿದು ಹೋಗುತ್ತಿರುವ ದೃಶ್ಯಗಳಿವೆ.
‘ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿದರೆ ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿನ್ವರ್ ಕುಟುಂಬ ಸದಸ್ಯರೊಂದಿಗೆ ಸುರಂಗದಲ್ಲಿ ಆಶ್ರಯ ಪಡೆಯಲು ಮುಂದಾಗಿದ್ದಿರಬಹುದು. ಜೊತೆಗೆ ತನ್ನ ಸಂಘಟನೆಯ ಕಾರ್ಯಕರ್ತರು ಅಮಾಯಕರ ಇಸ್ರೇಲಿಗಳನ್ನು ಹತ್ಯೆ ಮಾಡಿದ್ದನ್ನು, ಅವರನ್ನು ಅಪಹರಿಸಿದ್ದನ್ನು ಮತ್ತು ಅವರ ಮೇಲೆ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಆತ ಸುರಂಗದೊಳಗಿನಿಂದಲೇ ವೀಕ್ಷಿಸಿದ್ದಾನೆ‘ ಎಂದು ಇಸ್ರೇಲಿ ಸೇನೆ ಹೇಳಿದೆ.
ಅ.7ರಂದು ಸಿನ್ವರ್ ಸೂಚನೆಯಂತೆ ನಡೆದ ದಾಳಿಯೇ ಇಸ್ರೇಲ್ - ಹಮಾಸ್ ನಡುವೆ ಸುದೀರ್ಘ ಯುದ್ಧಕ್ಕೆ ಕಾರಣವಾಗಿದೆ. ಈ ಯುದ್ಧದಲ್ಲಿ ಈಗಾಗಲೇ 40000ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಸಾವಿಗೀಡಾಗಿದ್ದಾರೆ.
1200 ಜನರ ಇಸ್ರೇಲಿಗಳ ಹತ್ಯೆಗೂ ಮುನ್ನ ಸುರಂಗ ಸೇರಿದ್ದ ಸಿನ್ವರ್!
ಗಾಜಾ: ಕಳೆದ ವರ್ಷದ ಅ.7ರಂದು ಹಮಾಸ್ ಉಗ್ರರು ಇಸ್ರೇಲ್‌ನೊಳಗೆ ನುಗ್ಗಿ 1200 ಜನರನ್ನು ಬಲಿ ಪಡೆಯುವ ಘಟನೆಗೂ ಮುನ್ನ, ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಸುರಂಗದೊಳಗೆ ಅಡಗಿದ್ದ ವಿಡಿಯೋವೊಂದನ್ನು ಇಸ್ರೇಲಿ ಸೇನೆ ಬಿಡುಗಡೆ ಮಾಡಿದೆ.
ಸಿನ್ವರ್‌ನನ್ನು 3 ದಿನಗಳ ಹಿಂದಷ್ಟೇ ಇಸ್ರೇಲಿ ಸೇನೆ ಹತ್ಯೆ ಮಾಡಿತ್ತು. ಅದರ ಬೆನ್ನಲ್ಲೇ ಭಾನುವಾರ ಈ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಖಾನ್ ಯೂನಿಸ್ ಪ್ರದೇಶದ ಮನೆಯೊಂದರ ಕೆಳಗೆ ನಿರ್ಮಿಸಿದ್ದ ರಹಸ್ಯ ಸುರಂಗದೊಳಗೆ ಸಿನ್ವರ್, ತನ್ನ ಮಕ್ಕಳು, ಪತ್ನಿಯೊಂದಿಗೆ ಟೀವಿ, ಹಾಸಿಗೆ, ನೀರು, ದಿಂಬು, ಬ್ಯಾಗ್ ಹಿಡಿದು ಹೋಗುತ್ತಿರುವ ದೃಶ್ಯಗಳಿವೆ.
‘ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ದಾಳಿ ನಡೆಸಿದರೆ ಅದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿನ್ವರ್ ಕುಟುಂಬ ಸದಸ್ಯರೊಂದಿಗೆ ಸುರಂಗದಲ್ಲಿ ಆಶ್ರಯ ಪಡೆಯಲು ಮುಂದಾಗಿದ್ದಿರಬಹುದು. ಜೊತೆಗೆ ತನ್ನ ಸಂಘಟನೆಯ ಕಾರ್ಯಕರ್ತರು ಅಮಾಯಕರ ಇಸ್ರೇಲಿಗಳನ್ನು ಹತ್ಯೆ ಮಾಡಿದ್ದನ್ನು, ಅವರನ್ನು ಅಪಹರಿಸಿದ್ದನ್ನು ಮತ್ತು ಅವರ ಮೇಲೆ ಅತ್ಯಾಚಾರ ಎಸಗಿದ ದೃಶ್ಯಗಳನ್ನು ಆತ ಸುರಂಗದೊಳಗಿನಿಂದಲೇ ವೀಕ್ಷಿಸಿದ್ದಾನೆ‘ ಎಂದು ಇಸ್ರೇಲಿ ಸೇನೆ ಹೇಳಿದೆ.
ಅ.7ರಂದು ಸಿನ್ವರ್ ಸೂಚನೆಯಂತೆ ನಡೆದ ದಾಳಿಯೇ ಇಸ್ರೇಲ್ - ಹಮಾಸ್ ನಡುವೆ ಸುದೀರ್ಘ ಯುದ್ಧಕ್ಕೆ ಕಾರಣವಾಗಿದೆ. ಈ ಯುದ್ಧದಲ್ಲಿ ಈಗಾಗಲೇ 40000ಕ್ಕೂ ಹೆಚ್ಚು ಪ್ಯಾಲೆಸ್ತೀನಿಗಳು ಸಾವಿಗೀಡಾಗಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ವಾಯುದಾಳಿ: 87 ಸಾವು
ಡೇರ್ ಅಲ್ ಬಾಲಾಹ್/ ಬೈರೂತ್: ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹತ್ಯೆಗೆ ಹಿಜ್ಬುಲ್ಲಾ ಉಗ್ರರು ವಿಫಲ ಯತ್ನ ನಡೆಸಿದ ಬೆನ್ನಲ್ಲೇ ಇಸ್ರೇಲ್, ಗಾಜಾ ಪಟ್ಟಿ ಹಾಗೂ ಲೆಬನಾನ್ ಮೇಲೆ ವಾಯುದಾಳಿ ತೀವ್ರಗೊಳಿಸಿದೆ. ಇಸ್ರೇಲ್ ಶನಿವಾರ ತಡರಾತ್ರಿ ಹಾಗೂ ಭಾನುವಾರ ಉತ್ತರ ಗಾಜಾ ಮೇಲೆ ನಡೆಸಿದ ವಾಯುದಾಳಿಗೆ 87 ಪ್ಯಾಲೆಸ್ತೀನರು ಅಸುನೀಗಿದ್ದಾರೆ.
ಲೆಬನಾನ್ ರಾಜಧಾನಿ ದಕ್ಷಿಣ ಬೈರೂತ್ ಮೇಲೂ ಭಾರಿ ವಾಯುದಾಳಿಯನ್ನು ಶನಿವಾರ ತಡರಾತ್ರಿ ಇಸ್ರೇಲ್ ನಡೆಸಿದೆ. ಈ ವೇಳೆ 3 ಲೆಬನಾನ್ ಯೋಧರು ಸಾವನ್ನಪ್ಪಿದ್ದಾರೆ.
ಇನ್ನು ಗಾಜಾ ಮೇಲಿನ ದಾಳಿಯ ಮಾಹಿತಿ ನೀಡಿದ ಗಾಜಾ ಆರೋಗ್ಯ ಸಚಿವಾಲಯ, ‘ಇಸ್ರೇಲ್ ನಡೆಸಿದ ದಾಳಿಗೆ 87 ಮಂದಿ ಪ್ಯಾಲೆಸ್ತೀನೀಯರು ಮೃತಪಟ್ಟಿದ್ದಾರೆ. ಜತೆಗೆ ಕಳೆದ 2 ದಿನಗಳಿಂದ ಬೀಟ್ ಲಾಹಿಯಾದ ಮೇಲೆ ನಡೆಸುತ್ತಿರುವ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ’ ಎಂದಿದೆ.ಇಸ್ರೇಲ್ ಶನಿವಾರ ಉತ್ತರ ಗಾಜಾದ ಆಸ್ಪತ್ರೆಗಳು ಸೇರಿ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, 50 ಜನ ಅಸುನೀಗಿದ್ದರು.