ಸಾರಾಂಶ
ಬ್ರಿಕ್ಸ್ ದೇಶಗಳು ತಮ್ಮದೇ ಆದ ‘ಬ್ರಿಕ್ಸ್ ಕರೆನ್ಸಿ’ ರೂಪಿಸುವ ಯತ್ನದ ವಿರುದ್ಧ ಗುಡುಗಿರುವ ದೇಶದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಈ ರೀತಿ ಮಾಡಿದರೆ ಅಮೆರಿಕವು ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 100% (ದುಪ್ಪಟ್ಟು) ತೆರಿಗೆ ಹೇರಲಿದೆ’ ಎಚ್ಚರಿಸಿದ್ದಾರೆ.
ವಾಷಿಂಗ್ಟನ್ : ಅಮೆರಿಕದ ಡಾಲರ್‌ಗೆ ಪರ್ಯಾಯವಾಗಿ ಬ್ರಿಕ್ಸ್ ದೇಶಗಳು ತಮ್ಮದೇ ಆದ ‘ಬ್ರಿಕ್ಸ್ ಕರೆನ್ಸಿ’ ರೂಪಿಸುವ ಯತ್ನದ ವಿರುದ್ಧ ಗುಡುಗಿರುವ ದೇಶದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಈ ರೀತಿ ಮಾಡಿದರೆ ಅಮೆರಿಕವು ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 100% (ದುಪ್ಪಟ್ಟು) ತೆರಿಗೆ ಹೇರಲಿದೆ’ ಎಚ್ಚರಿಸಿದ್ದಾರೆ. ಬ್ರಿಕ್ಸ್ ದೇಶಗಳಲ್ಲಿ ಭಾರತ ಕೂಡ ಇರುವ ಕಾರಣ ಈ ಎಚ್ಚರಿಕೆ ಭಾರತಕ್ಕೂ ಅನ್ವಯಿಸಲಿದೆ.
ಶನಿವಾರ ಮಾತನಾಡಿದ ಅವರು, ‘ಡಾಲರ್‌ನಿಂದ ದೂರವಾಗಿ ಬ್ರಿಕ್ಸ್ ದೇಶಗಳು (ಬ್ರೆಜಿಲ್, ರಷ್ಯಾ₹ ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್ ಹಾಗೂ ಯುಎಇ) ತಮ್ಮದೇ ಆದ ಕರೆನ್ಸಿ ಮಾಡಿಕೊಳ್ಳುವ ಯತ್ನದಲ್ಲಿವೆ ಎಂದು ಗೊತ್ತಾಗಿದೆ. ಈ ಪ್ರಯತ್ನ ಮುಂದುವರಿಸಿದ್ದೇ ಆದಲ್ಲಿ ನಾವು ಆ ದೇಶಗಳ ವಸ್ತುಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸಲಿದ್ದೇವೆ. ಒಂದೋ ಸುಂಕ ಕಟ್ಟಲು ರೆಡಿ ಆಗಿ. ಇಲ್ಲದೇ ಹೋದರೆ ಅಮೆರಿಕದ ಸುಂದರ ಆರ್ಥಿಕತೆಗೆ ಗುಡ್‌ಬೈ ಹೇಳಿ’ ಎಂದು ಕುಟುಕುದರು.
ಇತ್ತೀಚೆಗೆ ಬ್ರಿಕ್ಸ್ ದೇಶಗಳು ಬೇರೆ ಕರೆನ್ಸಿ ಮಾಧ್ಯಮವನ್ನು ಹುಟ್ಟುಹಾಕುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತನಾಡಿದ್ದರು.
ಪ್ರತ್ಯೇಕ ಕರೆನ್ಸಿ ಸಾಧ್ಯತೆ ಇಲ್ಲ- ಜೈಶಂಕರ್:
ಟ್ರಂಪ್ ಬೆದರಿಕೆ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರತಿಕ್ರಿಯಿಸಿ, ‘ಡಾಲರ್‌ಗೆ ಪರ್ಯಾಯವಾಗಿ ದೇಶಗಳು ತಮ್ಮದೇ ಕರೆನ್ಸಿ ಬಳಸುವ ಸಾಧ್ಯತೆ ಅನುಮಾನ’ ಎಂದಿದ್ದಾರೆ.