ಪಾಕಿಸ್ತಾನದ ಪೂರ್ವ ಪಂಜಾಬ್‌ ಪ್ರಾಂತ್ಯದಲ್ಲಿ ಭಾರೀ ವಾಯುಮಾಲಿನ್ಯ : ತಿಂಗಳಲ್ಲಿ 18 ಲಕ್ಷ ಜನಕ್ಕೆ ಅನಾರೋಗ್ಯ

| Published : Nov 13 2024, 12:01 AM IST / Updated: Nov 13 2024, 07:38 AM IST

ಸಾರಾಂಶ

ಪಾಕಿಸ್ತಾನದ ಪೂರ್ವ ಪಂಜಾಬ್‌ ಪ್ರಾಂತ್ಯದಲ್ಲಿ ಭಾರೀ ವಾಯುಮಾಲಿನ್ಯ ಉಂಟಾದ ಪರಿಣಾಮ ಕಳೆದ ಒಂದು ತಿಂಗಳಲ್ಲಿ 18 ಲಕ್ಷ ಜನರು ಅನಾರೋಗ್ಯ ತುತ್ತಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ 5 ದಿನಗಳ ರಜೆಯನ್ನು ಘೋಷಿಸಲಾಗಿದೆ.

ಲಾಹೋರ್‌: ಪಾಕಿಸ್ತಾನದ ಪೂರ್ವ ಪಂಜಾಬ್‌ ಪ್ರಾಂತ್ಯದಲ್ಲಿ ಭಾರೀ ವಾಯುಮಾಲಿನ್ಯ ಉಂಟಾದ ಪರಿಣಾಮ ಕಳೆದ ಒಂದು ತಿಂಗಳಲ್ಲಿ 18 ಲಕ್ಷ ಜನರು ಅನಾರೋಗ್ಯ ತುತ್ತಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ 5 ದಿನಗಳ ರಜೆಯನ್ನು ಘೋಷಿಸಲಾಗಿದೆ.ಕಳೆದ ಒಂದು ತಿಂಗಳಿನಿಂದ ಪಂಜಾಬ್‌ ಪ್ರಾಂತ್ಯದಲ್ಲಿರುವ ವಾಯುಮಾಲಿನ್ಯ ಹೆಚ್ಚಳವಾಗುತ್ತಿದ್ದು, 12.7 ಕೋಟಿ ಜನರಿರುವ ಪಂಜಾಬ್‌ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಹೆಣಗಾಡುತ್ತಿದ್ದಾರೆ. 

ಇನ್ನು ಕಲುಷಿತಗೊಳ್ಳುತ್ತಿರುವ ಗಾಳಿಯಿಂದ ಜನರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ತಿಂಗಳಲ್ಲಿ 18 ಲಕ್ಷ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಹೆಚ್ಚಿನ ಜನರು ಉಸಿರಾಟ ಸಂಬಂಧಿತ ಸಮಸ್ಯೆ, ಕಣ್ಣು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.ಶಾಲೆಗೆ 5 ದಿನ ರಜೆ:ಮುಂಜಾಗ್ರತಾ ಕ್ರಮವಾಗಿ ಪಂಜಾಬ್ ಪ್ರಾಂತ್ಯದಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ 5 ದಿನಗಳ ರಜೆಯನ್ನು ಸರ್ಕಾರ ಘೋಷಿಸಿದೆ.

ವಿಶ್ವಸಂಸ್ಥೆ ಕಳವಳ:

ಪಂಜಾಬ್‌ನಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಕಳವಳ ವ್ಯಕ್ತ ಪಡಿಸಿದ್ದು, ಪಾಕಿಸ್ತಾನದಲ್ಲಿ 11 ಲಕ್ಷ ಮಕ್ಕಳು ಅಪಾಯದಲ್ಲಿದ್ದಾರೆ ಎಂದಿದೆ.ಪಂಜಾಬ್‌ನ ಪರಿಸರ ಸಂರಕ್ಷಣೆ ಇಲಾಖೆಯ ಪ್ರಕಾರ ಈ ಪ್ರಾಂತ್ಯದ ಮುಲ್ತಾನ್‌ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 700 ಗಡಿ ತಲುಪಿದೆ. ಜೊತೆಗೆ ಸಿಯಾಲ್‌ಕೋಟೆ ಸೇರಿದಂತೆ 7 ಜಿಲ್ಲೆಗಳಲ್ಲಿ 400ಕ್ಕಿಂತ ಅಧಿಕವಾಗಿದೆ. ವಾಯು ಗುಣಮಟ್ಟ ಸೂಚ್ಯಂಕ 300ಕ್ಕಿಂತ ಜಾಸ್ತಿಯಾದರೆ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದ.