ಪವಿತ್ರ ಯುದ್ಧದಲ್ಲಿ ದೇಹತ್ಯಾಗಕ್ಕೆ ಸಿದ್ಧ: ಹಿಜ್ಬುಲ್‌ ಮುಖ್ಯಸ್ಥ

| Published : Nov 04 2023, 12:30 AM IST

ಪವಿತ್ರ ಯುದ್ಧದಲ್ಲಿ ದೇಹತ್ಯಾಗಕ್ಕೆ ಸಿದ್ಧ: ಹಿಜ್ಬುಲ್‌ ಮುಖ್ಯಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್‌-ಹಮಾಸ್‌ ನಡುವೆ ಸಂಭವಿಸುತ್ತಿರುವ ಯುದ್ಧ ಪವಿತ್ರ ಕಾಳಗವಾಗಿದ್ದು, ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ಹಿಜ್ಬುಲ್ಲ ಮುಖ್ಯಸ್ಥ ಸಯ್ಯದ್‌ ಹಸ್ಸನ್‌ ನಸ್ರಲ್ಲ ತಿಳಿಸಿದ್ದಾರೆ.
ಲೆಬನಾನ್‌: ಇಸ್ರೇಲ್‌-ಹಮಾಸ್‌ ನಡುವೆ ಸಂಭವಿಸುತ್ತಿರುವ ಯುದ್ಧ ಪವಿತ್ರ ಕಾಳಗವಾಗಿದ್ದು, ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ಹಿಜ್ಬುಲ್ಲ ಮುಖ್ಯಸ್ಥ ಸಯ್ಯದ್‌ ಹಸ್ಸನ್‌ ನಸ್ರಲ್ಲ ತಿಳಿಸಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ದಾಳಿ ಮಾಡಿದ ನಂತರ ಮೊಟ್ಟಮೊದಲ ಬಾರಿಗೆ ಸಂದೇಶ ನೀಡಿರುವ ಹಸ್ಸನ್‌, ‘ಪ್ರಸ್ತುತ ನಡೆಯುತ್ತಿರುವ ಕಾಳಗ ಪ್ಯಾಲೆಸ್ತೀನ್‌ಗಾಗಿ ನಡೆಯುತ್ತಿದ್ದು, ಈ ಪವಿತ್ರ ಯುದ್ಧದಲ್ಲಿ ನಾವು ಪಾಲ್ಗೊಂಡು ಪ್ಯಾಲೆಸ್ತೀನ್‌ಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಇಸ್ರೇಲ್‌ ನಡೆಸುತ್ತಿರುವ ಭೂದಾಳಿಗೆ ಹಮಾಸ್‌ ಪರವಾಗಿ ಯುದ್ಧ ಮಾಡುವುದಾಗಿ ಹಿಜ್ಬುಲ್ಲಾ ನಾಯಕ ಬಹಿರಂಗವಾಗಿ ಘೋಷಿಸಿದ್ದಾರೆ.