15ಕೆಡಿವಿಜಿ1-ದಾವಣಗೆರೆ ತಾ. ಮತ್ತಿ ಗ್ರಾಮಕ್ಕೆ ಭೇಟಿ ನೀಡಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪಗೆ ಗ್ರಾಮಸ್ಥರು ಪೈಪ್ ಲೈನ್ಗೆ ಒಳಚರಂಡಿ ನೀರು ಸೇರುವ ಸ್ಥಳ, ಚರಂಡಿ ಅವ್ಯವಸ್ಥೆ ಬಗ್ಗೆ ಗಮನಕ್ಕೆ ತಂದರು. | Kannada Prabha
Image Credit: KP
ವೈಮಾನಿಕ ದಾಳಿಯಲ್ಲಿ ಉಗ್ರ ಬಿಲ್ಲಾಲ್ ಅಲ್-ಖೆದ್ರಾ ಖತಂ
ಟೆಲ್ ಅವಿವ್: ಕಳೆದ ವಾರ ತನ್ನ ನೆಲದ ಮೇಲೆ ಏಕಾಏಕಿ ದಾಳಿ ಮಾಡಿ 1,300ಕ್ಕೂ ಹೆಚ್ಚು ಜನ ಅಮಾಯಕರನ್ನು ಹತ್ಯೆಗೈದ ಹಮಾಸ್ ಭಯೋತ್ಪಾದಕರ ತಂಡವನ್ನು ಮುನ್ನಡೆಸಿದ್ದ ಮೂರನೇ ಉಗ್ರಗಾಮಿ ನಾಯಕನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ. ಶನಿವಾರವಷ್ಟೇ ದಾಳಿಯನ್ನು ಮುನ್ನಡೆಸಿದ್ದ ಇಬ್ಬರು ಹಮಾಸ್ ಕಮಾಂಡರ್‌ಗಳನ್ನು ಇಸ್ರೇಲ್ ಹತ್ಯೆ ಮಾಡಿತ್ತು. ‘ನಾವು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಕಮಾಂಡರ್ ಬಿಲ್ಲಾಲ್ ಅಲ್-ಖೆದ್ರಾ ಸಾವನ್ನಪ್ಪಿದ್ದಾನೆ. ಇಸ್ರೇಲ್ ನಗರಗಳಾದ ಕಿಬ್ಬುಟ್ಜ್ ನಿರಿಮ್ ಮತ್ತು ನಿರ್ ಓಜ್‌ಗಳ ಮೇಲಿನ ದಾಳಿಯಲ್ಲಿ ಪ್ರಮುಖನಾಗಿದ್ದ’ ಎಂದು ಇಸ್ರೇಲ್ ಹೇಳಿದೆ.
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.