ಇಸ್ಲಾಮಾಬಾದ್‌: ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಸಹ ಸಂಸ್ಥಾಪಕರ ಪೈಕಿ ಒಬ್ಬನಾದ ಅಮೀರ್‌ ಹಮ್ಜಾ (66) ಮೇಲೆ ಅನಾಮಿಕ ವ್ಯಕ್ತಿಗಳು ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಮ್ಜಾ ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ

ಲಾಹೋರ್‌ನ ಟೀವಿ ವಾಹಿನಿಯೊಂದರ ಕಚೇರಿ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ ವರ್ಷ ಕೂಡಾ ಹಮ್ಜಾನ ಮೇಲೆ ಗುಂಡಿನ ದಾಳಿ ನಡೆದಿತ್ತಾದರೂ ಆತ ಬದುಕುಳಿಗಿದ್ದ. ಬಳಿಕ ಆತನ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಪಂಜಾಬ್‌ ಪ್ರಾಂತ್ಯದ ಗುಜ್ರನ್ವಾಲಾ ಮೂಲದ ವ್ಯಕ್ತಿ

ಈಗ ಪಂಜಾಬ್‌ ಪ್ರಾಂತ್ಯದ ಗುಜ್ರನ್ವಾಲಾ ಮೂಲದ ವ್ಯಕ್ತಿಯಾಗಿದ್ದು 1985ರಲ್ಲಿ ಹಫೀಜ್‌ ಸಯೀದ್‌ ಜೊತೆಗೂಡಿ ಲಷ್ಕರ್‌ ಸಂಘಟನೆ ಸ್ಥಾಪಿಸಿದ್ದ. ಈತ 2005ರಲ್ಲಿ ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ಸೇರಿದಂತೆ ಭಾರತದಾದ್ಯಂತ ನಡೆದ ಹಲವು ಉಗ್ರ ದಾಳಿಗಳ ಹಿಂದೆ ಹಮ್ಜಾನ ಕೈವಾಡವಿತ್ತು. ಸಂಘಟನೆಯಲ್ಲಿ ಸಯೀದ್‌ ನಂತರದ ಸ್ಥಾನ ಹೊಂದಿರುವ ಹಮ್ಜಾ ಕಾಲದಿಂದ ಕಾಲಕ್ಕೆ ಸಂಘಟನೆಗೆ ಹೊಸ ದಿಕ್ಕು ತೋರಿಸುತ್ತಾ, ಉಗ್ರ ಸಿದ್ದಾಂತವನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.


ಪ್ರಖರ ಭಾಷಣಕಾರನಾಗಿ, ಲೇಖಕನಾಗಿ, ಲಷ್ಕರ್‌ ಸಂಘಟನೆಯ ಮುಖವಾಣಿ ಪತ್ರಿಕೆಯ ಸಂಪಾದಕನಾಗಿಯೂ ಹಮ್ಜಾ ಗುರುತಿಸಿಕೊಂಡಿದ್ದಾನೆ.