ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

| Published : May 15 2024, 01:34 AM IST

ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲ 34000 ಕೋಟಿ ರು.ಗೆ ಏರಿಕೆಯಾಗಿ ಚೀನಾ ಸಾಲದ ಬಲೆಗೆ ಮಾಲ್ಡೀವ್ಸ್‌ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಐಎಂಎಫ್‌ ಮಾಲ್ಡೀವ್ಸ್‌ಗೆ ಎಚ್ಚರಿಸಿದೆ.

ಮಾಲ್ಡೀವ್ಸ್‌: ಭಾರತದೊಂದಿಗೆ ಸಂಘರ್ಷದ ಬಳಿಕ ಚೀನಾದೊಂದಿಗೆ ಅನಿಯಮಿತವಾಗಿ ಆರ್ಥಿಕ ಸಹಾಯ ಪಡೆಯುತ್ತಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ತೀಕ್ಷ್ಣ ಎಚ್ಚರಿಕೆ ನೀಡಿದೆ.

ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ, ‘ಮಾಲ್ಡೀವ್ಸ್‌ ಅನಿಯಮಿತವಾಗಿ ಸಾಲಬಾಧೆಯಲ್ಲಿ ಸಿಲುಕಿರುವ ಕಾರಣ ಆರ್ಥಿಕ ಅಧಃಪತನಕ್ಕೆ ಕುಸಿಯುವ ಲಕ್ಷಣಗಳು ಕಾಣಿಸಿವೆ. ಸಾಲದ ಜೊತೆಗೆ ಆದಾಯ ವೃದ್ಧಿಸುವ ಯಾವುದೇ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರದ ಪ್ರಮುಖ ಆದಾಯ ಮೂಲವಾಗಿರುವ ಪ್ರವಾಸೋದ್ಯಮವನ್ನು ವೃದ್ಧಿಸಲು ಪೂರಕವಾಗುವಂತಹ ನೀತಿಗಳನ್ನು ರೂಪಿಸುವ ಜೊತೆಗೆ ಕಂದಾಯ ಹೆಚ್ಚಳ ಮಾಡುವ ಜೊತೆಗೆ ವೆಚ್ಚ ಕಡಿತ ಮಾಡಿ ಹೊರದೇಶಗಳಿಂದ ಆರ್ಥಿಕ ಸಹಾಯ ಪಡೆಯುವಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದೆ.

ಕಳೆದ ವರ್ಷ ಅಂತ್ಯಕ್ಕೆ ಮಾಲ್ಡೀವ್ಸ್‌ ಹೊರದೇಶಗಳಿಂದ ಬರೋಬ್ಬರಿ 33.5 ಸಾವಿರ ಕೋಟಿ ರು. ಸಾಲ ಪಡೆದಿದ್ದು, ಅದರಲ್ಲಿ ಶೇ.25ರಷ್ಟು ಪಾಲನ್ನು ಚೀನಾದಿಂದಲೇ ಪಡೆದಿದೆ. ಇದು ಮಾಲ್ಡೀವ್ಸ್‌ನ ಜಿಡಿಪಿಗಿಂತ ಶೇ.118ರಷ್ಟು ಹೆಚ್ಚಿದೆ.