ಕೆನಡಾ ಜನತೆಗೆ ಭಾರತದ ವೀಸಾ ನೀಡಿಕೆ ಮತ್ತೆ ಶುರು

| Published : Oct 26 2023, 01:00 AM IST

ಸಾರಾಂಶ

ಕೆನಡಾ ಜನರಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಭಾರತೀಯ ವೀಸಾ ಸೇವೆಯನ್ನು ಗುರುವಾರದಿಂದ ಪುನಾರಂಭಿಸಲಾಗುತ್ತದೆ ಎಂದು ಕೆನಡಾದಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ.
ಬಿಕ್ಕಟ್ಟಿನ ಕಾರಣ ಸ್ಥಗಿತಗೊಂಡಿದ್ದ ವೀಸಾ ಸೇವೆ ನವದೆಹಲಿ: ಕೆನಡಾ ಜನರಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಭಾರತೀಯ ವೀಸಾ ಸೇವೆಯನ್ನು ಗುರುವಾರದಿಂದ ಪುನಾರಂಭಿಸಲಾಗುತ್ತದೆ ಎಂದು ಕೆನಡಾದಲ್ಲಿರುವ ಭಾರತ ರಾಯಭಾರ ಕಚೇರಿ ಹೇಳಿದೆ. ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಿಂದ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದ ಕಾರಣ ಉಭಯ ದೇಶಗಳ ಸಂಬಂಧ ಹಳಸಿತ್ತು. ಸ್ಥಿತಿ ಇನ್ನೂ ಸಂಪೂರ್ಣವಾಗಿ ಸರಿಹೋಗಿಲ್ಲದ ಕಾರಣ ಕೆಲವು ವೀಸಾಗಳನ್ನು ಮಾತ್ರ ನೀಡಲಾಗುತ್ತಿದೆ. ಎಂಟ್ರಿ, ವ್ಯಾಪಾರ, ವೈದ್ಯಕೀಯ, ಕಾನ್ಫರೆನ್ಸ್‌ ವಿಭಾಗಗಳಲ್ಲಿ ವೀಸಾಗಳನ್ನು ನೀಡಲಾಗುತ್ತದೆ. ಒಟ್ಟಾವ, ಟೊರಂಟೋ ಮತ್ತು ವ್ಯಾನ್‌ಕೋವರ್‌ನಲ್ಲಿರುವ ರಾಯಭಾರಿಗಳು ವೀಸಾ ಪುನಾರಂಭಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಅದು ಸ್ಪಷ್ಟಪಡಿಸಿದೆ. ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯಯಲ್ಲಿ ಭಾರತದ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಹೇಳಿದ ಬಳಿಕ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿತ್ತು. ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದಕ್ಕೆ ಭಾರತ ತಾತ್ಕಾಲಿಕವಾಗಿ ತಡೆ ನೀಡಿತ್ತು.