ಸಾರಾಂಶ
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ
ನ್ಯೂಯಾರ್ಕ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವಂತೆ ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಇದೇ ಮೊದಲ ಬಾರಿಗೆ ಗಾಜಾ ಯುದ್ಧದ ವಿಷಯದಲ್ಲಿ ತಟಸ್ಥ ಧೋರಣೆ ಕೈಬಿಟ್ಟು ತತ್ವಾಧಾರಿತವಾಗಿ ಮುನ್ನಡೆದಿದೆ. ಈಜಿಪ್ಟ್ ಮಂಡಿಸಿದ ಗೊತ್ತುವಳಿ ಪರವಾಗಿ 153 ದೇಶಗಳು ಒಪ್ಪಿಗೆ ಸೂಚಿಸಿದರೆ ಆಸ್ಟ್ರಿಯಾ, ಇಸ್ರೇಲ್ ಹಾಗೂ ಅಮೆರಿಕ ಸೇರಿದಂತೆ 10 ರಾಷ್ಟ್ರಗಳು ವಿರೋಧಿಸಿದವು. 23 ರಾಷ್ಟ್ರಗಳು ಸಭೆಗೆ ಗೈರಾಗಿದ್ದವು.