ಬಾಂಗ್ಲಾ ಸರ್ಕಾರದ ವಿರುದ್ಧ ಸ್ಥಳೀಯರ ಮೀಸಲು ಹೋರಾಟ : 4 ಹಿಂದೂ ದೇಗುಲಗಳ ಮೇಲೆ ದಾಳಿ

| Published : Aug 06 2024, 12:40 AM IST / Updated: Aug 06 2024, 04:56 AM IST

ಸಾರಾಂಶ

ಬಾಂಗ್ಲಾದೇಶದ ಪ್ರತಿಭಟನಕಾರರು ಮೂರು ಹಿಂದೂ ದೇಗುಲಗಳು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರಗಳ ಮೇಲೆ ಸೋಮವಾರ ದಾಳಿ ನಡೆಸಿದ್ದಾರೆ.

ಢಾಕಾ: ಬಾಂಗ್ಲಾದೇಶದ ಪ್ರತಿಭಟನಕಾರರು ಮೂರು ಹಿಂದೂ ದೇಗುಲಗಳು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರಗಳ ಮೇಲೆ ಸೋಮವಾರ ದಾಳಿ ನಡೆಸಿದ್ದಾರೆ. ಢಾಕಾದಲ್ಲಿರುವ ಹಿಂದೂ, ಬೌದ್ಧ, ಕ್ರೈಸ್ತ ಐಕ್ಯತಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. 

2010ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಉಭಯ ದೇಶಗಳ ನಡುವಿನ ಸೌಹಾರ್ದಯುತ ಸಲುವಾಗಿ ಇದನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ ದೇಶದ ಹಲವು ಭಾಗಗಳಲ್ಲಿ ನಾಲ್ಕು ದೇಗುಲಗಳ ಮೇಲೂ ದಾಳಿ ನಡೆಸಿ ಹಾನಿ ಮಾಡಲಾಗಿದೆ.

ಇಬ್ಬರು ಹಿಂದೂಗಳ ಹತ್ಯೆ 

ಢಾಕಾ: ಬಾಂಗ್ಲಾ ಸರ್ಕಾರದ ವಿರುದ್ಧ ಸ್ಥಳೀಯರ ಮೀಸಲು ಹೋರಾಟ, ಹಿಂದೂಗಳ ವಿರುದ್ಧ ದಾಳಿಗೂ ಕಾರಣವಾಗಿದೆ. ರಂಗ್‌ಪುರ ಎಂಬಲ್ಲಿ ಪ್ರತಿಭಟನಾಕಾರರು ಹಿಂದೂಗಳ ಮನೆ ಮೇಲೆ ದಾಳಿ ನಡೆಸಿ, ಇಬ್ಬರನ್ನು ಹತ್ಯೆಗೈದಿದ್ದಾರೆ. ಹಿಂದೂ ಅವಾಮಿ ಲೀಗ್‌ ಪಕ್ಷದ ನಾಯಕ ಹರದನ್‌ ರಾಯ್‌ ಹಾಗೂ ಅವರ ಅಳಿಯನನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. 

ಮತ್ತೊಂದೆಡೆ ನೋಖಾಲಿ ಎಂಬಲ್ಲಿ ಹಿಂದೂಗಳ ಮನೆಗೆ ಉದ್ರಿಕ್ತರ ಗುಂಪು ನುಗ್ಗಿ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಸಿಕ್ಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಿಂದೂ ಮಹಿಳೆಯೊಬ್ಬರು ‘ಭಗವಂತ ಭಗವಂತ’ ಎಂದು ಕೂಗುತ್ತಿರುವುದು ಅದರಲ್ಲಿ ಸೆರೆಯಾಗಿದೆ.