ಬಾಲ್ಟಿಮೋರ್‌ ಸೇತುವೆ ಅವಗಢದಲ್ಲಿ 6 ಸಾವು: ಇಬ್ಬರ ರಕ್ಷಣೆ

| Published : Mar 28 2024, 12:50 AM IST / Updated: Mar 28 2024, 11:51 AM IST

ಸಾರಾಂಶ

ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಸೇತುವೆಗೆ ಡಾಲಿ ಎಂಬ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಮೇಲೆ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ 6 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಸರ್ಕಾರ ಪ್ರಕಟಿಸಿದೆ. ಅಲ್ಲದೆ ನದಿಯಿಂದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದೆ.

ನ್ಯೂಯಾರ್ಕ್‌: ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಕಾಟ್‌ ಸೇತುವೆಗೆ ಡಾಲಿ ಎಂಬ ಸರಕು ಸಾಗಣೆ ಹಡಗು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಮೇಲೆ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದ 6 ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಸರ್ಕಾರ ಪ್ರಕಟಿಸಿದೆ. 

ಅಲ್ಲದೆ ನದಿಯಿಂದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ಸತತ 36 ಗಂಟೆಗಳ ಕಾಲ ನಡೆಸಲಾಗಿದ್ದು, ಗುಯೆಟ್‌ಮಾಲಾ ರಾಷ್ಟ್ರದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. 

ಉಳಿದವರು ನದಿಯಲ್ಲಿ ಪತ್ತೆಯಾಗದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಕಟಿಸಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೇರಿಲ್ಯಾಂಡ್‌ ಸರ್ಕಾರ ತಿಳಿಸಿದೆ. ಅಲ್ಲದೆ ನಾಪತ್ತೆಯಾಗಿರುವವರು ಮೆಕ್ಸಿಕೋ ಮೂಲದವರು ಎಂಬುದಾಗಿ ಸರ್ಕಾರ ತಿಳಿಸಿದೆ.