ಸಾರಾಂಶ
ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪೈಕಿ ಭಾರತ 80ನೇ ಸ್ಥಾನದಲ್ಲಿದ್ದು, ಸಿಂಗಾಪುರ ಮತ್ತು ಜಪಾನ್‌ಗಳು ಸತತ ಐದನೇ ವರ್ಷವೂ ಮೊದಲ ಸ್ಥಾನದಲ್ಲೇ ಉಳಿದುಕೊಂಡಿವೆ.
ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪೈಕಿ ಭಾರತ 80ನೇ ಸ್ಥಾನದಲ್ಲಿದ್ದು, ಸಿಂಗಾಪುರ ಮತ್ತು ಜಪಾನ್‌ಗಳು ಸತತ ಐದನೇ ವರ್ಷವೂ ಮೊದಲ ಸ್ಥಾನದಲ್ಲೇ ಉಳಿದುಕೊಂಡಿವೆ.
ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ ಮತ್ತು ಸ್ಪೇನ್ ವಿಶ್ವದ ಅತ್ಯಂತ ಶಕ್ತಿಶಾಲಿ ಸ್‌ಪೋರ್ಟ್ ಹೊಂದಿದ್ದ, ಇವು 194 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಹೊಂದಿವೆ.
193 ದೇಶಗಳಿಗೆ ಪ್ರವೇಶ ಹೊಂದಿರುವ ಫಿನ್ಲೇಂಡ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ 2ನೇ ಸ್ಥಾನದಲ್ಲಿವೆ. ಇನ್ನು 62 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶದೊಂದಿಗೆ ಭಾರತ ಪಟ್ಟಿಯ 80ನೇ ಸ್ಥಾನದಲ್ಲಿದ್ದರೆ ನೆರೆಯ ಪಾಕಿಸ್ತಾನ 101ನೇ ಸ್ಥಾನದಲ್ಲಿದೆ. ಇನ್ನು ಕೇವಲ 28 ಸ್ಥಳಗಳಿಗೆ ವೀಸಾ ಮುಕ್ತ ಪ್ರವೇಶ ಹೊಂದಿರುವ ಅಫ್ಘಾನಿಸ್ತಾನ ಪಟ್ಟಿಯ ಕೊನೆಯಲ್ಲಿದೆ.