ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಹಣ 4 ವರ್ಷದ ಕನಿಷ್ಠ

| Published : Jun 21 2024, 01:11 AM IST / Updated: Jun 21 2024, 04:08 AM IST

ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಹಣ 4 ವರ್ಷದ ಕನಿಷ್ಠ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಹಣದಲ್ಲಿ ಶೇ.70ರಷ್ಟು ಭಾರೀ ಇಳಿಕೆ ಕಂಡುಬಂದಿದೆ.

ನವದೆಹಲಿ/ಜ್ಯೂರಿಚ್‌: ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಹಣದಲ್ಲಿ ಶೇ.70ರಷ್ಟು ಭಾರೀ ಇಳಿಕೆ ಕಂಡುಬಂದಿದೆ. ಸ್ವಿಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್‌ ಬಿಡುಗಡೆ ಮಾಡಿರುವ ವರದಿ ಅನ್ವಯ 2023ರ ಅಂತ್ಯದಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು ಒಟ್ಟಾರೆ 9,771 ಕೋಟಿ ರು. ಹಣ ಹೊಂದಿದ್ದಾರೆ. ಇದು 4 ವರ್ಷದ ಕನಿಷ್ಠವಾಗಿದೆ.

2021ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸೇರಿದ 14 ವರ್ಷದ ಗರಿಷ್ಠ ಪ್ರಮಾಣದ ಹಣ ಪತ್ತೆಯಾಗಿತ್ತು. ಆದರೆ 2022ರಲ್ಲಿ ಈ ಹಣದಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಈ ಇಳಿಕೆ ಪ್ರವೃತ್ತಿ 2023ರಲ್ಲೂ ಮುಂದುವರೆದಿರುವುದು ವರದಿಯಲ್ಲಿ ಕಂಡುಬಂದಿದೆ.

ಗ್ರಾಹಕರ ಠೇವಣಿ ಖಾತೆಯಲ್ಲಿ ಹಣದಲ್ಲಿ ಇಳಿಕೆ ಕಂಡುಬಂದಿರುವುದರ ಜೊತೆಗೆ, ಭಾರತದಲ್ಲಿರುವ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳ ಶಾಖೆಗಳಲ್ಲಿ ಹೊಂದಿರುವ ಹಣದಲ್ಲೂ ಇಳಿಕೆ ದಾಖಲಾಗಿದೆ.

2006ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸೇರಿದ 61 ಸಾವಿರ ಕೋಟಿ ರು. ಪತ್ತೆಯಾಗಿತ್ತು. ಅದು ಸಾರ್ವಕಾಲಿಕ ಗರಿಷ್ಠ ಪ್ರಮಾಣವಾಗಿತ್ತು.

ಸ್ವಿಸ್‌ ಬ್ಯಾಂಕ್‌ಗಳಲ್ಲಿ ಹಣ ಇಟ್ಟ ವಿದೇಶಿಯರ ಪೈಕಿ ಬ್ರಿಟನ್‌, ಅಮೆರಿಕ ಮತ್ತು ಫ್ರಾನ್ಸ್‌ ಮೂಲದ ಜನರು ಕ್ರಮವಾಗಿ ಮೊದಲ ಮೂರು ಸ್ಥಾನ ಹೊಂದಿದ್ದಾರೆ. ಭಾರತ 67ನೇ ಸ್ಥಾನದಲ್ಲಿದೆ. 2022ರಲ್ಲಿ ಭಾರತ 46ನೇ ಸ್ಥಾನದಲ್ಲಿತ್ತು.