ಯುರೋಪ್‌ನಲ್ಲಿ 5 ದಿನ ಆಹಾರವಿಲ್ಲದೆ ಸುತ್ತಾಡಿದ್ದೆ ಇನ್ಫೋಸಿಸ್ ಮೂರ್ತಿ

| Published : Apr 05 2024, 01:01 AM IST / Updated: Apr 05 2024, 03:54 AM IST

ಯುರೋಪ್‌ನಲ್ಲಿ 5 ದಿನ ಆಹಾರವಿಲ್ಲದೆ ಸುತ್ತಾಡಿದ್ದೆ ಇನ್ಫೋಸಿಸ್ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ 50 ವರ್ಷಗಳ ಹಿಂದೆ ಯುರೋಪ್‌ನಲ್ಲಿ ಹಲವು ದಿನ ಆಹಾರವಿಲ್ಲದೆ ಅಲೆದಾಡಿದ್ದ ಅನುಭವ ಹಂಚಿಕೊಂಡಿದ್ದಾರೆ.

ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ 50 ವರ್ಷಗಳ ಹಿಂದೆ ಯುರೋಪ್‌ನಲ್ಲಿ ಹಲವು ದಿನ ಆಹಾರವಿಲ್ಲದೆ ಅಲೆದಾಡಿದ್ದ ಅನುಭವ ಹಂಚಿಕೊಂಡಿದ್ದಾರೆ.

ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಅವರು, 50 ವರ್ಷಗಳ ಹಿಂದೆ ನಾನು ಯುರೋಪ್‌, ಬಲ್ಗೇರಿಯಾ, ಸರ್ಬಿಯಾದಲ್ಲಿ ಸುತ್ತಾಡಿದ್ದೆ. ಆಗ ನಿಶ್‌ ಎಂಬ ಬಲ್ಗೇರಿಯಾದಲ್ಲಿ ಸುತ್ತಾಡುವಾಗ 120 ಗಂಟೆ ಕಾಲ (5 ದಿನ) ಹಸಿವು ಅನುಭವಿಸಿದ್ದೇನೆ’ ಎಂದರು.

‘ಆದರೆ, ನೀವು ಹಸಿವನ್ನು ಅನುಭವಿಸಿಲ್ಲ. ನಾನು ಮತ್ತು ಇಲ್ಲಿರುವ ಭಾರತೀಯರು ಭಾರತ ಸರ್ಕಾರದಿಂದ ಉತ್ತಮ ಶಿಕ್ಷಣ ಪಡೆದಿದ್ದೇವೆ. ಆದ್ದರಿಂದ ನಾಗರಿಕರಾಗಿ ನಮ್ಮ ರಾಷ್ಟ್ರಕ್ಕೆ ಕೃತಜ್ಞತೆ ತೋರಿಸಬೇಕು. ಬಡ ಮಕ್ಕಳ ಭವಿಷ್ಯದ ಪೀಳಿಗೆಗೆ ಉತ್ತಮ ಶಿಕ್ಷಣ ಪಡೆಯಲು ಸಹಾಯ ಮಾಡಬೇಕು’ ಎಂದರು.