ಸಾರಾಂಶ
ಹಮಾಸ್ ಉಗ್ರರು ಅಸ್ಪತ್ರೆಗಳ ಸುರಂಗಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿರುವ ಸಾರ್ವಜನಿಕರ ನಡುವೆ ಅಡಗಿಕೊಂಡಿದ್ದಾರೆ ಎಂಬ ಅನುಮಾನಗಳ ನಡುವೆಯೇ, ಇಸ್ರೇಲ್‌ನ ಸೇನೆ ಶುಕ್ರವಾರ ಗಾಜಾದ ಹಲವು ಆಸ್ಪತ್ರೆಗಳ ಆಸುಪಾಸಿನ ಸ್ಥಳಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.
ಆಸ್ಪತ್ರೆ ಸುರಂಗದಲ್ಲಿ ಉಗ್ರರು ನೆಲೆಯೂರಿರುವ ಶಂಕೆ ಹಿನ್ನೆಲೆಖಾನ್ ಯೂನಿಸ್: ಹಮಾಸ್ ಉಗ್ರರು ಅಸ್ಪತ್ರೆಗಳ ಸುರಂಗಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿರುವ ಸಾರ್ವಜನಿಕರ ನಡುವೆ ಅಡಗಿಕೊಂಡಿದ್ದಾರೆ ಎಂಬ ಅನುಮಾನಗಳ ನಡುವೆಯೇ, ಇಸ್ರೇಲ್‌ನ ಸೇನೆ ಶುಕ್ರವಾರ ಗಾಜಾದ ಹಲವು ಆಸ್ಪತ್ರೆಗಳ ಆಸುಪಾಸಿನ ಸ್ಥಳಗಳ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.
ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಶಿಫಾ ಆಸ್ಪತ್ರೆಯನ್ನು ಉಗ್ರರು ತಮ್ಮ ಪ್ರಮುಖ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದ್ದು, ಈ ಆಸ್ಪತ್ರೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿ ಇಸ್ರೇಲ್ ಸೇನೆ ಬೀಡು ಬಿಟ್ಟಿದೆ. ಆದರೆ ಆಸ್ಪತ್ರೆಗಳಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಆರೋಪವನ್ನು ಆಸ್ಪತ್ರೆಯ ಸಿಬ್ಬಂದಿ ಹಾಗೂ ಉಗ್ರರು ಅಲ್ಲಗಳೆದಿದ್ದು, ದಾಳಿ ನಡೆಸಲು ಇಸ್ರೇಲ್ ಈ ಕಾರಣ ನೀಡುತ್ತಿದೆ ಎಂದಿದ್ದಾರೆ.