ಹದ್ದು, ಗಿಡುಗಗಳಿಗೆ ಜಿಪಿಎಸ್‌ಅಳವಡಿಸಿ ಶವಗಳನ್ನು ಪತ್ತೆಹಚ್ಚುತ್ತಿರುವ ಇಸ್ರೇಲ್‌ ಸೇನೆ

| Published : Nov 10 2023, 01:01 AM IST

ಹದ್ದು, ಗಿಡುಗಗಳಿಗೆ ಜಿಪಿಎಸ್‌ಅಳವಡಿಸಿ ಶವಗಳನ್ನು ಪತ್ತೆಹಚ್ಚುತ್ತಿರುವ ಇಸ್ರೇಲ್‌ ಸೇನೆ
Share this Article
  • FB
  • TW
  • Linkdin
  • Email

ಸಾರಾಂಶ

ಅ.7ರಂದು ಹಮಾಸ್‌ ಬಂಡುಕೋರರಿಂದ ನಡೆದ ಹತ್ಯಾಕಾಂಡದ ಶವಗಳನ್ನು ಪತ್ತೆಹಚ್ಚಲು ಇಸ್ರೇಲ್‌ ಸೇನೆ ಹದ್ದು ಮತ್ತು ಗಿಡುಗಗಳ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ.

- ವನ್ಯಜೀವಿ ಕಾರ್ಯಕರ್ತನ ಸಹಾಯದಿಂದ ಕಾರ್ಯಾಚರಣೆ

ಗಾಜಾ಼: ಅ.7ರಂದು ಹಮಾಸ್‌ ಬಂಡುಕೋರರಿಂದ ನಡೆದ ಹತ್ಯಾಕಾಂಡದ ಶವಗಳನ್ನು ಪತ್ತೆಹಚ್ಚಲು ಇಸ್ರೇಲ್‌ ಸೇನೆ ಹದ್ದು ಮತ್ತು ಗಿಡುಗಗಳ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ. ಹದ್ದು, ಗಿಡುಗ ಮುಂತಾದ ನರಭಕ್ಷಕ ಪಕ್ಷಿಗಳಿಗೆ ಜಿಪಿಎಸ್‌ ಸಾಧನ ಅಳವಡಿಸಿ ಶವಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಒಹಾದ್‌ ಹಟ್ಜೋ಼ಫೆ಼ ಎಂಬ ಸಾಹಸಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತನ ಸಹಾಯದಿಂದ ನಡೆಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ಹಟ್ಜೋ಼ಫೆ಼, ‘ನನ್ನನ್ನು ಇಸ್ರೇಲ್‌ ಸೇನೆಯ ಎಯ್ಟಾನ್‌ ವಿಭಾಗವು ಸಂಪರ್ಕಿಸಿ ಶವಗಳನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಕೋರಿತು. ಅದರಂತೆ ಬೀರಿ ಪ್ರದೇಶದಲ್ಲಿ ನನ್ನ ಸಮುದ್ರ ಹದ್ದು ಅ.23ರಂದು ಹಾರಾಡಿದ್ದು, ಅಲ್ಲಿ ತೆಗೆದ ಚಿತ್ರಗಳನ್ನು ಸೇನೆಗೆ ಕಳುಹಿಸಿರುತ್ತೇನೆ. ಅಲ್ಲಿ ನಾಲ್ಕು ಜನರ ಶವಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಅಲ್ಲದೆ ಬೊನೆಲ್ಲಿ ಹದ್ದಿನ ಸಹಾಯದಿಂದ ಇಸ್ರೇಲ್‌ ಒಳಗಿನ ಪ್ರದೇಶದಲ್ಲಿ ಹಲವು ಶವಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಯಿತು’ ಎಂದು ತಿಳಿಸಿದ್ದಾರೆ.ಇಸ್ರೇಲ್‌ ಸೇನೆ ಹೇಳುವಂತೆ ಇಲ್ಲಿಯವರೆಗೆ ಸುಮಾರು 843 ನಾಗರಿಕರು ಹಾಗೂ 351 ಸೈನಿಕರ ಶವಗಳನ್ನು ಈ ವಿಧಾನದ ಮೂಲಕ ಸಂರಕ್ಷಿಸಲಾಗಿದೆ.