ಇಸ್ರೇಲ್‌ಗೆ ನುಗ್ಗಿ ಹಮಾಸ್ ಕ್ರೌರ್ಯ
KannadaprabhaNewsNetwork | Published : Oct 11 2023, 12:47 AM IST
ಇಸ್ರೇಲ್‌ಗೆ ನುಗ್ಗಿ ಹಮಾಸ್ ಕ್ರೌರ್ಯ
ಸಾರಾಂಶ
ಟೆಲ್ ಅವಿವ್: ಗಾಜಾಪಟ್ಟಿ ದಾಟಿ ಇಸ್ರೇಲ್‌ಗೆ 4 ದಿನಗಳ ಹಿಂದೆ ನುಗ್ಗಿದ್ದ ಹಮಾಸ್ ಉಗ್ರರು 100ಕ್ಕೂ ಹೆಚ್ಚು ಜನರನ್ನು ಬರ್ಬರವಾಗಿ ಕೊಂದಿದ್ದು ಈಗ ಬೆಳಕಿಗೆ ಬಂದಿದೆ.
ಟೆಲ್ ಅವಿವ್: ಗಾಜಾಪಟ್ಟಿ ದಾಟಿ ಇಸ್ರೇಲ್‌ಗೆ 4 ದಿನಗಳ ಹಿಂದೆ ನುಗ್ಗಿದ್ದ ಹಮಾಸ್ ಉಗ್ರರು 100ಕ್ಕೂ ಹೆಚ್ಚು ಜನರನ್ನು ಬರ್ಬರವಾಗಿ ಕೊಂದಿದ್ದು ಈಗ ಬೆಳಕಿಗೆ ಬಂದಿದೆ. ಇದೇ ವೇಳೆ 40 ಮಕ್ಕಳ ಕೈಕಾಲು ಕತ್ತರಿಸಿ ಕೊಂದ ಇನ್ನೊಂದು ಘಟನೆಯೂ ಬೆಳಕಿಗೆ ಬಂದಿದೆ. ಹೀಗೆ ವೃದ್ಧರು, ಮಹಿಳೆಯರು, ಮಕ್ಕಳೆನ್ನದೆ ಸಿಕ್ಕಸಿಕ್ಕವರನ್ನು ಗುಂಡಿಕ್ಕಿ ಸಾಯಿಸಿ ಅಥವಾ ಕೈಕಾಲು ಕತ್ತರಿಸಿ ಸಾಯಿಸಿ ಸಜೀವವಾಗಿ ದಹಿಸಿದ್ದಾರೆ. ಹಮಾಸ್ ಬಂದೂಕುಧಾರಿಗಳು ಕಿಬ್ಬುಟ್ಜ್‌ನಲ್ಲಿಯೇ 100 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ ಸ್ವಯಂಸೇವಾ ಸಂಸ್ಥೆಯೊಂದರ ಪ್ರಮುಖರೊಬ್ಬರು ಹೇಳಿದ್ದಾರೆ. ‘ಅವರು ಎಲ್ಲರನ್ನೂ ಹೊಡೆದುರುಳಿಸಿದರು. ಅಮಾಯಕ ಮಕ್ಕಳು,, ಶಿಶುಗಳು, ವೃದ್ಧರು, ಮಹಿಳೆಯರು- ಹೀಗೆ ಎಲ್ಲರನ್ನೂ ಕೊಲೆ ಮಾಡಿದರು’ ಎಂದಿದ್ದಾರೆ. ಈ ನಡುವೆ, ದಕ್ಷಿಣ ಇಸ್ರೇಲ್‌ನ ಖಫಾ ಎಂಬಲ್ಲಿ 40 ಮಕ್ಕಳನ್ನು ಕೈಕಾಲು ಕತ್ತರಿಸಿ ಕೊಲೆ ಮಾಡಿದ್ದು ಕೂಡ ಮಂಗಳವಾರ ವರದಿಯಾಗಿದೆ.