ವಾಯುದಾಳಿ ವೇಳೆ ಹಮಾಸ್‌ ಉಗ್ರರ ನಾಯಕ ಯಾಹ್ಯಾ ಸಿನ್ವರ್‌ ಸಾವನ್ನಪ್ಪಿರಬಹುದು ಎಂದು ಇಸ್ರೇಲ್‌ ಶಂಕೆ

| Published : Oct 18 2024, 12:20 AM IST / Updated: Oct 18 2024, 04:14 AM IST

ವಾಯುದಾಳಿ ವೇಳೆ ಹಮಾಸ್‌ ಉಗ್ರರ ನಾಯಕ ಯಾಹ್ಯಾ ಸಿನ್ವರ್‌ ಸಾವನ್ನಪ್ಪಿರಬಹುದು ಎಂದು ಇಸ್ರೇಲ್‌ ಶಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗಾಜಾದಲ್ಲಿ ನಿರಾಶ್ರಿತರಿದ್ದ ಶಾಲೆಯೊಂದರ ಮೇಲೆ ಗುರುವಾರ ನಡೆದ ವಾಯುದಾಳಿ ವೇಳೆ ಹಮಾಸ್‌ ಉಗ್ರರ ನಾಯಕ ಯಾಹ್ಯಾ ಸಿನ್ವರ್‌ ಸಾವನ್ನಪ್ಪಿರಬಹುದು ಎಂದು ಇಸ್ರೇಲ್‌ ಶಂಕೆ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಅದು ಹೇಳಿದೆ.

ಜರುಸಲೆಂ: ಗಾಜಾದಲ್ಲಿ ನಿರಾಶ್ರಿತರಿದ್ದ ಶಾಲೆಯೊಂದರ ಮೇಲೆ ಗುರುವಾರ ನಡೆದ ವಾಯುದಾಳಿ ವೇಳೆ ಹಮಾಸ್‌ ಉಗ್ರರ ನಾಯಕ ಯಾಹ್ಯಾ ಸಿನ್ವರ್‌ ಸಾವನ್ನಪ್ಪಿರಬಹುದು ಎಂದು ಇಸ್ರೇಲ್‌ ಶಂಕೆ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಅದು ಹೇಳಿದೆ.

ಗುರುವಾರ ಇಸ್ರೇಲ್‌ ನಡೆಸಿದ ದಾಳಿಯಲ್ಲಿ 5 ಮಕ್ಕಳು ಸೇರಿ 15 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಆದರೆ ಸಿನ್ವರ್‌ ಸಾವನ್ನಪ್ಪಿರುವ ಕುರಿತು ಅದು ಯಾವುದೇ ಮಾಹಿತಿ ನೀಡಿಲ್ಲ. ಇನ್ನೊಂದೆಡೆ ತಾನು ನಡೆಸಿದ ದಾಳಿಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಈ ಮೂವರು ಪೈಕಿ ಸಿನ್ವರ್‌ ಕೂಡಾ ಒಬ್ಬನಾಗಿರಬಹುದು ಎಂದು ಇಸ್ರೇಲ್‌ ಶಂಕಿಸಿದೆ.

ಸಿನ್ವರ್‌, 2023 ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ದಾಳಿ ನಡೆಸಿ 1200ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ ಪ್ರಕರಣದ ರೂವಾರಿಯಾಗಿದ್ದ. ಆತನ ಹತ್ಯೆಗೆ ಒಂದು ವರ್ಷದಿಂದ ಇಸ್ರೇಲ್‌ ಪ್ರಯತ್ನ ಮಾಡುತ್ತಿತ್ತಾದರೂ ಆತ ಭೂಗತನಾಗಿದ್ದ.

ಕಳೆದ ಜುಲೈನಲ್ಲಿ ಇರಾನ್‌ ರಾಜಧಾನಿ ಟೆಹ್ರಾನ್‌ನ ಅಪಾರ್ಟ್‌ಮೆಂಟ್‌ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಹಮಾಸ್‌ನ ಹಿಂದಿನ ನಾಯಕ ಇಸ್ಮಾಯಿಲ್‌ ಹನಿಯೇ ಸಾವನ್ನಪ್ಪಿದ್ದ. ಬಳಿಕ ಹಮಾಸ್‌ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್‌ ಡೈಫ್‌ ಕೂಡಾ ಬಲಿಯಾಗಿದ್ದ. ಅದರ ಬೆನ್ನಲ್ಲೇ ಇದೀಗ ಸಿನ್ವರ್‌ ಹತ್ಯೆಯ ಶಂಕೆ ವ್ಯಕ್ತವಾಗಿದೆ.