ಲೆಬನಾನ್‌ನ ಬೈರೂತ್‌ ಮೇಲೆ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಕಮಾಂಡರ್‌ ಹತ್ಯೆ

| Published : Oct 09 2024, 01:32 AM IST / Updated: Oct 09 2024, 08:00 AM IST

ಸಾರಾಂಶ

ಇಸ್ರೇಲ್‌-ಹಮಾಸ್‌ ಯುದ್ಧ ಶುರುವಾಗಿ 1 ವರ್ಷ ತುಂಬಿರುವ ಹೊತ್ತಿನಲ್ಲಿ ಲೆಬನಾನ್‌ನ ಬೈರೂತ್‌ ಮೇಲೆ ತಾವು ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಕಮಾಂಡರ್‌ ಮೃತಪಟ್ಟಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ.

ಜೆರುಸಲೇಂ/ ಬೈರೂತ್‌: ಇಸ್ರೇಲ್‌-ಹಮಾಸ್‌ ಯುದ್ಧ ಶುರುವಾಗಿ 1 ವರ್ಷ ತುಂಬಿರುವ ಹೊತ್ತಿನಲ್ಲಿ ಲೆಬನಾನ್‌ನ ಬೈರೂತ್‌ ಮೇಲೆ ತಾವು ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಕಮಾಂಡರ್‌ ಮೃತಪಟ್ಟಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ.

ಹಿಜ್ಬುಲ್ಲಾದ ಸರಕು ಸಾಗಣೆ, ಹಾಗೂ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಸುಹೇಲ್‌ ಹುಸೇನಿ ಮೃತಪಟ್ಟಿದ್ದು, ಈತ ಇರಾನ್‌ನಿಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಿವಿಧ ಹಿಜ್ಬುಲ್ಲಾ ಘಟಕಗಳಿಗೆ ವಿತರಿಸುತ್ತಿದ್ದು, ಆತ ಅದರ ಮಿಲಿಟರಿ ಕೌನ್ಸಿಲ್‌ನ ಸದಸ್ಯನೂ ಆಗಿದ್ದ ಎಂದು ಇಸ್ರೇಲ್‌ ತಿಳಿಸಿದೆ.

ಹಿಜ್ಬುಲ್ಲಾ ಎಚ್ಚರಿಕೆ:

ತನ್ನ ಒಬ್ಬೊಬ್ಬರೇ ನಾಯಕರನ್ನು ಕಳೆದುಕೊಳ್ಳುತ್ತಿರುವ ಹಿಜ್ಬುಲ್ಲಾ ಇದರಿಂದ ಕೆರಳಿದ್ದು, ಇಸ್ರೇಲ್‌ನೊಳಗೆ ತನ್ನ ರಾಕೆಟ್‌ ದಾಳಿಯನ್ನು ತೀವ್ರಹಾಗೂ ವಿಸ್ತಾರಗೊಳಿಸಿವುದಾಗಿ ಘೋಷಿಸಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಹಿಜ್ಬುಲ್ಲಾ ಕಾರ್ಯನಿರ್ವಾಹಕ ನಾಯಕ ಶೇಖ್ ನಯೀಮ್ ಕಸ್ಸೆಮ್, ‘ಇಸ್ರೇಲ್‌ ವಾರಗಳಿಂದ ನಡೆಸುತ್ತಿರುವ ವೈಮಾನಿಕ ದಾಳಿಗಳ ಹೊರತಾಗಿಯೂ ಹಿಜ್ಬೊಲ್ಲಾದ ಸಾಮರ್ಥ್ಯ ಅಖಂಡವಾಗಿದೆ. ಸಾವನ್ನಪ್ಪಿರುವ ಕಮಾಂಡರ್‌ಗಳ ಜಾಗಕ್ಕೆ ಹೊಸಬರನ್ನು ನೇಮಿಸಿದೆ’ ಎಂದು ಹೇಳಿದ್ದಾರೆ.