ನಿಜ್ಜರ್‌ ಹತ್ಯೆಯಲ್ಲಿ ಭಾರತದ ಪಾತ್ರ ಬಗ್ಗೆ ಕೆನಡಾ ಪ್ರಧಾನಿಗೆ ನಮ್ಮಿಂದ ಮಾಹಿತಿ: ಪನ್ನೂನ್‌

| Published : Oct 17 2024, 12:03 AM IST / Updated: Oct 17 2024, 12:04 AM IST

ಸಾರಾಂಶ

ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ ಕಾರ್ಯಕರ್ತ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಪ್ರಧಾನಿ ಕಚೇರಿಗೆ ನಾವೇ ಮಾಹಿತಿ ನೀಡಿದ್ದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾನೆ.

ಒಟ್ಟಾವಾ: ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯ ಕಾರ್ಯಕರ್ತ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಕೆನಡಾ ಪ್ರಧಾನಿ ಕಚೇರಿಗೆ ನಾವೇ ಮಾಹಿತಿ ನೀಡಿದ್ದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾನೆ. ಈ ಮೂಲಕ ಖಲಿಸ್ತಾನಿಗಳ ಜೊತೆ ಭಾರತ ವಿರೋಧಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಜೊತೆಗೆ ತಾನು ನಿಕಟ ಸಂಬಂಧ ಹೊಂದಿರುವುದನ್ನು ಪನ್ನೂನ್‌ ಬಹಿರಂಗಪಡಿಸಿದ್ದಾನೆ.

ಇಲ್ಲಿನ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪನ್ನುನ್‌, ಎಸ್‌ಎಫ್‌ಜೆ ಕಳೆದ ಎರಡು ಮೂರು ವರ್ಷಗಳಿಂದ ಪ್ರಧಾನ ಮಂತ್ರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದೆ. ಭಾರತೀಯ ಹೈ ಕಮಿಷನ್‌ನ ಬೇಹುಗಾರಿಕೆ ಜಾಲದ ವಿವರಗಳನ್ನು ಟ್ರುಡೋಗೆ ಒದಗಿಸಿದೆ ಎಂದು ಹೇಳಿದ್ದಾನೆ.

==

ಶೌರ್ಯ ಚಕ್ರ ಪುರಸ್ಕೃತ ಸಿಂಗ್‌ ಹತ್ಯೆ ಹಿಂದೆ ಕೆನಡಾ ಖಲಿಸ್ತಾನಿ ಕೈವಾಡ: ಎನ್‌ಐಎನವದೆಹಲಿ: 2020ರಲ್ಲಿ ಪಂಜಾಬ್‌ನಲ್ಲಿ ನಡೆದ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಯೋಧ ಬಲ್ವಿಂದರ್‌ ಸಿಂಗ್‌ ಸಂಧು ಹತ್ಯೆಯಲ್ಲಿ ಕೆನಡಾ ಖಲಿಸ್ತಾನಿಗಳ ಕೈವಾಡವಿತ್ತು ಎಂದು ರಾಷ್ಟ್ರೀಯ ತನಿಖಾ ದಳ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಖಲಿಸ್ತಾನಿಗಳ ವಿಷಯದಲ್ಲಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಮರ ನಡೆಯುತ್ತಿರುವ ಹೊತ್ತಿನಲ್ಲೇ ಎನ್‌ಐಎ ಈ ಮಾಹಿತಿ ನೀಡಿದೆ.2020ರಲ್ಲಿ ಪಂಜಾಬ್‌ನಲ್ಲಿ ಸಂಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಕೆನಡಾ ಮೂಲದ ಖಲಿಸ್ತಾನಿ ಉಗ್ರರಾದ ಸುಖ್‌ಮೀತ್‌, ಸನ್ನಿ ಟೊರೊಂಟೊ ಮತ್ತು ಲಖ್ವೀರ್‌ ಸಿಂಗ್‌ ಭಾರತದಲ್ಲಿ ಖಲಿಸ್ತಾನಿ ವಿರೋಧಿಗಳನ್ನು ತೊಡೆದು ಹಾಕಲು ಸಂಧು ಅವರನ್ನು ಹತ್ಯೆ ಮಾಡಿಸಿದ್ದರು ಎಂದು ಎನ್‌ಐಎ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.