ಸಾರಾಂಶ
ಪಾಕಿಸ್ತಾನ ಚುನಾವಣೆಯಲ್ಲಿ ಅಕ್ರಮ ಎಸಗಿದ ಕಾರಣ ರಾವಲ್ಪಿಂಡಿಯ ಚುನಾವಣಾಧಿಕಾರಿ ಲಿಯಾಕತ್ ಅಲಿ ರಾಜೀನಾಮೆ ನೀಡಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ಎಸಗುವ ಮೂಲಕ ಪಿಟಿಐ ಬೆಂಬಲಿತ ಅಭ್ಯರ್ಥಿಗೆ ಸೋಲುಣಿಸಿ ಪಿಎಂಎಲ್-ಎನ್ ಅಭ್ಯರ್ಥಿಗೆ ನಕಲಿ ಮತ ಹಾಕುವ ಮೂಲಕ ಗೆಲ್ಲಿಸಲಾಯಿತು ಎಂದು ರಾವಲ್ಪಿಂಡಿ ಚುನಾವಣಾಧಿಕಾರಿ ಲಿಯಾಕತ್ ಅಲಿ ತಪ್ಪೊಪ್ಪಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದೇ ವೇಳೆ ತಮ್ಮ ಸಂದೇಶದಲ್ಲಿ ಅಕ್ರಮ ಎಸಗುವಲ್ಲಿ ಪಾಕಿಸ್ತಾನದ ಮುಖ್ಯ ಚುನಾವಣಾಧಿಕಾರಿ ಹಾಗೂ ಮುಖ್ಯ ನ್ಯಾಯಾಧೀಶರೂ ಶಾಮೀಲಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ನೀಡಿದ್ದಾರೆ.