ನ್ಯೂಜಿಲೆಂಡ್‌ ನೂತನ ಪ್ರಧಾನಿಯಾಗಿ ಬಲಪಂಥೀಯ ಕ್ರಿಸ್ಟೋಫರ್‌ ಲಕ್ಸನ್‌ ಆಯ್ಕೆ

| Published : Oct 15 2023, 12:46 AM IST

ನ್ಯೂಜಿಲೆಂಡ್‌ ನೂತನ ಪ್ರಧಾನಿಯಾಗಿ ಬಲಪಂಥೀಯ ಕ್ರಿಸ್ಟೋಫರ್‌ ಲಕ್ಸನ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯೂಜಿಲೆಂಡ್‌ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಲೇಬರ್‌ ಪಕ್ಷ ಸೋಲನ್ನಪ್ಪಿದ್ದು, 6 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡ ಹೊರನಡೆದಿದೆ
ಆಕ್ಲೆಂಡ್‌: ನ್ಯೂಜಿಲೆಂಡ್‌ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಲೇಬರ್‌ ಪಕ್ಷ ಸೋಲನ್ನಪ್ಪಿದ್ದು, 6 ವರ್ಷಗಳ ಬಳಿಕ ಅಧಿಕಾರ ಕಳೆದುಕೊಂಡ ಹೊರನಡೆದಿದೆ. ಬಲಪಂಥೀಯ ನಾಯಕ ಕ್ರಿಸ್ಟೋಫರ್‌ ಲಕ್ಸನ್‌ ಪ್ರಧಾನಿಯಾಗಿ ಚುನಾಯಿತರಾಗಿದ್ದಾರೆ. ಹಿಂದಿನ ಪ್ರಧಾನಿ ಜೆಸಿಂಡಾ ಆ್ಯರ್ಡೆನ್‌ ಅವರ ದಿಢೀರ್‌ ರಾಜೀನಾಮೆ ಹಿನ್ನೆಲೆಯಲ್ಲಿ 9 ತಿಂಗಳ ಹಿಂದಷ್ಟೇ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಎಡಪಂಥೀಯ ನಾಯಕ ಕ್ರಿಸ್‌ ಹಿಪ್‌ಕಿನ್ಸ್‌ ಪಕ್ಷವನ್ನು ಮರಳಿ ಗೆಲುವಿನ ಮೆಟ್ಟಿಲೇರಿಸಲು ವಿಫಲರಾಗಿದ್ದಾರೆ. ಬಲಪಂಥೀಯ ನ್ಯಾಷನಲ್‌ ಪಾರ್ಟಿಗೆ ದೇಶದ ಜನತೆ ಅಧಿಕಾರ ನೀಡಿದ್ದು, ಪಕ್ಷದ ನಾಯಕ ಕ್ರಿಸ್ಟೋಫರ್‌ ಲಕ್ಸನ್‌ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.