ಭಾರತ ಅಭಿವೃದ್ಧಿಗೆ ಮೋದಿಯೇ ಕಾರಣ: ಅಮೆರಿಕ ಉದ್ಯಮಿ

| Published : May 09 2024, 01:00 AM IST / Updated: May 09 2024, 04:22 AM IST

ಸಾರಾಂಶ

ಜಗತ್ತಿನ ಭೂಪಟದಲ್ಲಿ ಭಾರತ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಎಂದು ಅಮೆರಿಕದ ಸಿಲಿಕಾನ್‌ ವ್ಯಾಲಿಯ ಭಾರತೀಯ ಮೂಲದ ಉದ್ಯಮಿ ಸಂದೀಪ್‌ ಭಟ್‌ ಹೇಳಿದ್ದಾರೆ.

ಸಾಂತಾ ಕ್ಲಾರಾ (ಅಮೆರಿಕ): ಜಗತ್ತಿನ ಭೂಪಟದಲ್ಲಿ ಭಾರತ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಎಂದು ಅಮೆರಿಕದ ಸಿಲಿಕಾನ್‌ ವ್ಯಾಲಿಯ ಭಾರತೀಯ ಮೂಲದ ಉದ್ಯಮಿ ಸಂದೀಪ್‌ ಭಟ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಭಾರತ ಹಾಗೂ ಭಾರತೀಯರ ಬಗೆಗೆಗಿನ ಭಾವನೆ ಬದಲಾಗಿದೆ. ಭಾರತ ಹಿಂದೆಂದೊಗಿಂತಲೂ ಭಾರಿ ವೇಗವಾಗಿ ಬೆಳೆಯುತ್ತಿದೆ. ಜಾಗತಿಕವಾಗಿ ಭಾರತದ ಆರ್ಥಿಕತೆ ಬೆಳಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.

 ವೈಯಕ್ತಿವಾಗಿ ನಾನು ಮೋದಿ ಅವರ ಅಭಿಮಾನಿಯಾಗಿದ್ದು, ಅವರು ದೇಶದ ಆರ್ಥಿಕತೆ ಬೆಳಗುವಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಭಾರತದ ವಿಶ್ವದ ಐದನೇ ದುಡ್ಡ ಆರ್ಥಿಕತೆಯಾಗಿದೆ. ಭಾರತ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ’ ಎಂದರು.