ಮಸ್ಕ್‌ ಆಸ್ತಿ 500 ಶತಕೋಟಿ ಡಾಲರ್‌: ವಿಶ್ವದ ಮೊದಲಿಗ

| N/A | Published : Oct 03 2025, 06:30 AM IST

elon musk

ಸಾರಾಂಶ

ವಿಶ್ವದ ಅತಿ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರ ನಿವ್ವಳ ಆಸ್ತಿ ಮೌಲ್ಯ 500 ಶತಕೋಟಿ ಡಾಲರ್‌ ಗಡಿ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇಷ್ಟು ಆಸ್ತಿ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಲಾನ್‌ ಮಸ್ಕ್‌ ಪಾತ್ರರಾಗಿದ್ದಾರೆ.

 ವಾಷಿಂಗ್ಟನ್‌: ವಿಶ್ವದ ಅತಿ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಅವರ ನಿವ್ವಳ ಆಸ್ತಿ ಮೌಲ್ಯ 500 ಶತಕೋಟಿ ಡಾಲರ್‌ ಗಡಿ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇಷ್ಟು ಆಸ್ತಿ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಎಲಾನ್‌ ಮಸ್ಕ್‌ ಪಾತ್ರರಾಗಿದ್ದಾರೆ.

ಫೋರ್ಬ್ಸ್ ಬಿಲಿಯನೇರ್‌ಗಳ ಸೂಚ್ಯಂಕದ ಪ್ರಕಾರ, ಬುಧವಾರ ಸಂಜೆ 4:15ಕ್ಕೆ ಮಸ್ಕ್‌ ನಿವ್ವಳ ಆಸ್ತಿ ಮೌಲ್ಯ 500 ಬಿಲಿಯನ್‌ ಡಾಲರ್ (44 ಲಕ್ಷ ಕೋಟಿ ರು.)ಗೆ ತಲುಪಿತ್ತು. ಈ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ. ಭಾರತದ ಈ ವರ್ಷದ ಬಜೆಟ್‌ ಮೊತ್ತ 50.65 ಲಕ್ಷ ಕೋಟಿ ರು. ಆಗಿದೆ. ಎಲಾನ್‌ ಮಸ್ಕ್‌ ಒಬ್ಬರ ಆಸ್ತಿ 44.3 ಲಕ್ಷ ಕೋಟಿ ರು. ಇದೆ.

ಸಂಪತ್ತು ಹೆಚ್ಚಳಕ್ಕೆ ಕಾರಣ:

ಮಸ್ಕ್ ಸಂಪತ್ತು ಹೆಚ್ಚಳಕ್ಕೆ ಪ್ರಮುಖ ಕಾರಣ ಟೆಸ್ಲಾ, ಸ್ಪೇಸ್‌ ಎಕ್ಸ್‌ನ ಷೇರು ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿರುವುದು. ಈ ಹಿಂದೆ ಮಸ್ಕ್‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಪ್ತ ಸಲಹೆಗಾರರಾಗಿದ್ದಾಗ ಕೆಲವು ಸವಾಲುಗಳನ್ನು ಎದುರಿಸಿದರು. ಆದರೆ ಆ ಬಳಿಕ ಮತ್ತೆ ತಮ್ಮ ಕಂಪನಿಗಳತ್ತ ಸಂಪೂರ್ಣ ಗಮನ ಹರಿಸುತ್ತಿರುವುದರಿಂದ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ. ಇದರಿಂದಾಗಿ ಕಂಪನಿಯ ಷೇರುಗಳು ಏರುಗತಿಯಲ್ಲಿ ಸಾಗಿವೆ.

Read more Articles on