ಬ್ಯಾಂಕ್‌ ವಂಚನೆ ಕೇಸಲ್ಲಿ ಮಾಜಿ ಅಧ್ಯಕ್ಷ ಟ್ರಂಪ್‌ಗೆ ₹3800 ಕೋಟಿ ದಂಡ!

| Published : Feb 18 2024, 01:34 AM IST / Updated: Feb 18 2024, 02:28 PM IST

ಬ್ಯಾಂಕ್‌ ವಂಚನೆ ಕೇಸಲ್ಲಿ ಮಾಜಿ ಅಧ್ಯಕ್ಷ ಟ್ರಂಪ್‌ಗೆ ₹3800 ಕೋಟಿ ದಂಡ!
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಂಕ್‌ಗಳಿಗೆ ವಂಚಿಸಿದ ಹಿನ್ನೆಲೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಭಾರೀ ಮೊತ್ತದ ದಂಡ ವಿಧಿಸಿ ಅಮೆರಿಕದ ನ್ಯಾಯಾಲಯ ತೀರ್ಪು ನೀಡಿದೆ.

ನ್ಯೂಯಾರ್ಕ್‌: ನಕಲಿ ಹಣಕಾಸು ವಹಿವಾಟಿನ ಸ್ಟೇಟ್‌ಮೆಂಟ್‌ಗಳನ್ನು ನೀಡಿ ಬ್ಯಾಂಕ್‌ಗಳಿಗೆ ವಂಚಿಸಿದ್ದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಬರೋಬ್ಬರಿ 3800 ಕೋಟಿ ರು.(454.9 ಮಿಲಿಯನ್‌ ಡಾಲರ್‌) ದಂಡ ವಿಧಿಸಿದೆ.

ಅಲ್ಲದೆ ನ್ಯೂಯಾರ್ಕ್‌ನಲ್ಲಿ ಮುಂದಿನ ಮೂರು ವರ್ಷಗಳ ಕಾಲ ಯಾವುದೇ ಉದ್ಯಮ ನಡೆಸದಂತೆ ನಿರ್ಬಂಧ ವಿಧಿಸಿದೆ. 

ಈ ದಂಡದ ಮೊತ್ತವನ್ನು ಪಾವತಿಸಿದ್ದೇ ಆದಲ್ಲಿ ಸುಮಾರು 22 ಸಾವಿರ ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ಟ್ರಂಪ್‌ ಆಸ್ತಿಯಲ್ಲಿ ಶೇ.14-17ರಷ್ಟು ಸಂಪತ್ತು ಕರಗಲಿದೆ. 

ಆದರೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಟ್ರಂಪ್‌ ಪ್ರಕಟಿಸಿದ್ದಾರೆ.

ಏನು ವಂಚನೆ?
ಡೊನಾಲ್ಡ್‌ ಟ್ರಂಪ್‌ ಬ್ಯಾಂಕ್‌ಗಳಿಂದ ಸಾಲ ಪಡೆಯುವಾಗ ತಮ್ಮ ಕಂಪನಿಯ ವಹಿವಾಟಿನ ಕುರಿತು ನಕಲಿ ದಾಖಲೆ ಸಲ್ಲಿಸಿದ್ದರು. 

ಈ ಮೂಲಕ ಹೆಚ್ಚಿನ ಸಾಲ ಪಡೆಯುವ ಅರ್ಹತೆ ಪಡೆದುಕೊಳ್ಳುವುದು ಟ್ರಂಪ್‌ ಉದ್ದೇಶವಾಗಿತ್ತು. 

ಇದು ಅಮೆರಿಕದಲ್ಲಿ ನಾಗರಿಕ ಅಪರಾಧದ ಅಡಿಯಲ್ಲಿ ಬರುವ ಕಾರಣ ಟ್ರಂಪ್‌ಗೆ ಬಡ್ಡಿ ಸಮೇತ ದಂಡ ವಿಧಿಸಲಾಗಿದೆ.