ಸಾರಾಂಶ
ಕಮಲಾ ಹ್ಯಾರಿಸ್ ಅವರು ಅಮೆರಿಕ ಚುನಾವಣೆಯಲ್ಲಿ ಸೋತರೀ ಭಾರತದ ಪಾಲಿಗೆ ಸಂತಸದ ಸಮಾಚಾರವೊಂದಿದೆ.
ವಾಷಿಂಗ್ಟನ್: ಕಮಲಾ ಹ್ಯಾರಿಸ್ ಅವರು ಅಮೆರಿಕ ಚುನಾವಣೆಯಲ್ಲಿ ಸೋತರೀ ಭಾರತದ ಪಾಲಿಗೆ ಸಂತಸದ ಸಮಾಚಾರವೊಂದಿದೆ. ಭಾರತದ ಅಳಿಯನಾದ ಜೆ.ಡಿ. ವ್ಯಾನ್ಸ್ ಅವರು ಅಮೆರಿಕ ಉಪಾಧ್ಯಕ್ಷ ಆಗುವುದು ಪಕ್ಕಾ ಆಗಿದೆ.ರಿಪಬ್ಲಿಕನ್ ಪಕ್ಷದ ಟ್ರಂಪ್ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ ಬಳಿಕ, ಅದೇ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ವ್ಯಾನ್ಸ್ ಸ್ಪರ್ಧಿಸಿದ್ದರು. ಅಧ್ಯಕ್ಷರಾದ ಪಕ್ಷದವರೇ ಉಪಾಧ್ಯಕ್ಷರಾಗುವ ಕಾರಣ ವ್ಯಾನ್ಸ್ ಆಯ್ಕೆ ಕೂಡ ಖಚಿತವಾಗಿದೆ. ಈ ಬಗ್ಗೆ ತಮ್ಮ ವಿಜಯ ಭಾಷಣದಲ್ಲಿ ಪ್ರಸ್ತಾಪಿಸಿದ ಟ್ರಂಪ್, ‘ನಿಮ್ಮನ್ನು ಉಪಾಧ್ಯಕ್ಷ ಎನ್ನಲು ಅಡ್ಡಿಯಿಲ್ಲ’ ಎಂದು ಚಟಾಕಿ ಹಾರಿಸಿದರು.ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಅವರು ಆಂಧ್ರಪ್ರದೇಶದ ವಡ್ಲೂರು ಗ್ರಾಮದವರು. ಅಮೆರಿಕಕ್ಕೆ ತೆರಳಿ ವ್ಯಾನ್ಸ್ ಅವರನ್ನು ವರಿಸಿದ್ದರು.
==