ಸಾರಾಂಶ
ಕೃತಕ ಬುದ್ಧಿಮತ್ತೆಯ ದೈತ್ಯ ಓಪನ್ ಎಐ ಸಿಇಓ ಸ್ಯಾಮ್ ಆಲ್ಟ್‌ಮನ್ ತಮ್ಮ ಗೆಳೆಯ ಒಲೀವರ್ ಮುಲ್ಹೆರಿನ್ ಜೊತೆಗೆ ಬುಧವಾರ ವಿವಾಹವಾಗಿದ್ದಾರೆ.
ನ್ಯೂಯಾರ್ಕ್: ಕೃತಕ ಬುದ್ಧಿಮತ್ತೆಯ ದೈತ್ಯ ಓಪನ್ ಎಐ ಸಿಇಓ ಸ್ಯಾಮ್ ಆಲ್ಟ್‌ಮನ್ ತಮ್ಮ ಗೆಳೆಯ ಒಲೀವರ್ ಮುಲ್ಹೆರಿನ್ ಜೊತೆಗೆ ಬುಧವಾರ ವಿವಾಹವಾಗಿದ್ದಾರೆ.
ಸ್ಯಾಮ್ ಹಾಗೂ ಒಲೀವರ್ ವರ್ಷಗಳಿಂದ ಗೆಳೆಯರಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ವಾಸವಿದ್ದರು. ಇವರು ಸಂಬಂಧದಲ್ಲಿರುವ ಸುದ್ದಿ ನಡುವೆ ಕಳೆದ ವರ್ಷ ಅಮೆರಿಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಔತಣಕೂಟದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.
ಬಳಿಕ ನ್ಯೂಯಾರ್ಕ್ ಮ್ಯಾಗಜೀನ್ ಸಂದರ್ಶನವೊಂದರಲ್ಲಿ ಆಲ್ಟ್‌ಮೆನ್ ತಾವು ಒಲ್ಲೀವರ್‌ರನ್ನು ವಿವಾಹವಾಗುವುದಾಗಿಯೂ ಹೇಳಿದ್ದರು. ಇವರು ಬುಧವಾರ ಅಮೆರಿಕದ ಹುವಾಯಿ ದ್ವೀಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.