ಪಿಒಕೆ ನಮ್ಮ ದೇಶ ಅಲ್ಲ: ಹೈಗೆ ಪಾಕ್‌ ವಕೀಲರ ಅಚ್ಚರಿ ಮಾಹಿತಿ

| Published : Jun 02 2024, 01:45 AM IST / Updated: Jun 02 2024, 03:57 AM IST

ಪಿಒಕೆ ನಮ್ಮ ದೇಶ ಅಲ್ಲ: ಹೈಗೆ ಪಾಕ್‌ ವಕೀಲರ ಅಚ್ಚರಿ ಮಾಹಿತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ನಾವು ಗೆದ್ದರೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗುವುದು ಎಂಬ ಬಿಜೆಪಿ ಭರವಸೆಗಳ ನಡುವೆಯೇ ಆಜಾದ್‌ ಕಾಶ್ಮೀರ (ಪಿಒಕೆಯನ್ನು ಪಾಕಿಸ್ತಾನ ಕರೆಯುವುದು), ವಿದೇಶಿ ಸರಹದ್ದು ಎಂದು ಪಾಕಿಸ್ತಾನ ಸರ್ಕಾರ, ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಅಚ್ಚರಿಯ ಮಾಹಿತಿ ಸಲ್ಲಿಸಿದೆ.

ಇಸ್ಲಾಮಾಬಾದ್‌: ಈ ಬಾರಿ ನಾವು ಗೆದ್ದರೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗುವುದು ಎಂಬ ಬಿಜೆಪಿ ಭರವಸೆಗಳ ನಡುವೆಯೇ ಆಜಾದ್‌ ಕಾಶ್ಮೀರ (ಪಿಒಕೆಯನ್ನು ಪಾಕಿಸ್ತಾನ ಕರೆಯುವುದು), ವಿದೇಶಿ ಸರಹದ್ದು ಎಂದು ಪಾಕಿಸ್ತಾನ ಸರ್ಕಾರ, ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಅಚ್ಚರಿಯ ಮಾಹಿತಿ ಸಲ್ಲಿಸಿದೆ.

ಕಾಶ್ಮೀರಿ ಕವಿ ಅಹ್ಮದ್ ಫರ್ಹಾದ್‌ ಶಾ ನಿಗೂಢ ನಾಪತ್ತೆ ಹಿನ್ನೆಲೆಯಲ್ಲಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಪಾಕಿಸ್ತಾನದ ಹೆಚ್ಚುವರಿ ಅಟಾರ್ನಿ ಜನರಲ್‌, ‘ಆಜಾದ್‌ ಕಾಶ್ಮೀರದಲ್ಲಿ ಅಹ್ಮದ್‌ ಶಾ ಇರುವ ಕಾರಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ. ಅದು ವಿದೇಶಿ ಸರಹದ್ದು. ಅಲ್ಲಿಗೆ ಪ್ರತ್ಯೇಕ ಸಂವಿಧಾನ, ನ್ಯಾಯಾಲಯಗಳಿವೆ. ಅಲ್ಲಿನ ಕೋರ್ಟ್‌ಗಳು ನೀಡಿದ ತೀರ್ಪನ್ನು ವಿದೇಶಿ ನ್ಯಾಯಾಲಯದ ತೀರ್ಪುಗಳ ರೀತಿ ಪರಿಗಣಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ನ್ಯಾ. ಕಯಾನಿ ಅವರು, ‘ಅದು ವಿದೇಶಿ ನೆಲವೆಂದಾದಲ್ಲಿ ಪಾಕಿಸ್ತಾನ ಸೇನೆ ಆ ಪ್ರದೇಶಕ್ಕೆ ಪ್ರವೇಶ ಮಾಡಿದ್ದು ಹೇಗೆ’ ಎಂದು ಪ್ರಶ್ನಿಸಿದರು.