ಪಾಕಿಸ್ತಾನದಲ್ಲಿ ಚುನಾವಣೆ ಪ್ರಕಟವಾಗಿ ಒಂದು ವಾರ ಕಳೆದರೂ ಹೊಸ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿದ್ದು, ಅಧಿಕಾರದ ಹಂಚಿಕೆಯಲ್ಲಿ ಮಾತುಕತೆ ನಡೆಸುತ್ತಿವೆ.

ಇಸ್ಲಾಮಾಬಾದ್‌: ಪಾಕಿಸ್ತಾನ ಸಂಸತ್‌ ಚುನಾವಣೆಯ ಫಲಿತಾಂಶ ಬಂದು ಒಂದು ವಾರ ಕಳೆದರೂ ಸರ್ಕಾರ ರಚನೆ ಬಿಕ್ಕಟ್ಟು ಹಾಗೆಯೇ ಮುಂದುವರೆದಿದೆ.

ಮೈತ್ರಿ ಸರ್ಕಾರದ ರೂಪರೇಷೆ ಬಗ್ಗೆ ಪಿಎಂಎಲ್‌-ಎನ್‌ ಮತ್ತು ಪಿಪಿಪಿ ಪಕ್ಷಗಳಲ್ಲಿ ಸಹಮತ ಮೂಡದೇ ಇರುವುದೂ ಬಿಕ್ಕಟ್ಟು ಮುಂದುವರೆಯಲು ಕಾರಣ ಎನ್ನಲಾಗಿದೆ.

ಶನಿವಾರ ನಡೆದ ಸಮನ್ವಯ ಸಮಿತಿಯ ಮೂರನೇ ಸಭೆಯಲ್ಲಿ ಪ್ರಮುಖ ಸಾಂವಿಧಾನಿಕ ಹುದ್ದೆಗಳಾದ ಅಧ್ಯಕ್ಷ ನ್ಯಾಷನಲ್‌ ಅಸೆಂಬ್ಲಿ ಸ್ಪೀಕರ್‌, ಸೆನಟ್‌ ಸಭಾದ್ಯಕ್ಷ ಹುದ್ದೆಗಳಿಗೆ ಪಟ್ಟು ಹಿಡಿದ ಕಾರಣ ಸಹಮತ ಮೂಡಲಿಲ್ಲ ಎನ್ನಲಾಗಿದೆ.

265 ಕ್ಷೇತ್ರಗಳಿರುವ ಪಾಕಿಸ್ತಾನ ಸಂಸತ್ತಿನಲ್ಲಿ ನವಾಜ್‌ ಷರೀಫ್‌ ನೇತೃತ್ವದ ಪಿಎಂಎಲ್‌-ಎನ್‌ ಪಕ್ಷ 75, ಬಿಲಾವಲ್‌ ಭುಟ್ಟೋ ನೇತೃತ್ವದ ಪಿಪಿಪಿ 54 ಸ್ಥಾನ ಗೆದ್ದು ಸರ್ಕಾರ ರಚನೆಗೆ ಮಾತುಕತೆ ನಡೆಸಿವೆ.