ಮಹಿಳಾ ವೈದ್ಯರು ಚಿಕಿತ್ಸೆ ನೀಡಿದ ರೋಗಿ ಸಾಯುವ ಸಾಧ್ಯತೆ ಕಡಿಮೆ!

| Published : Apr 26 2024, 12:53 AM IST / Updated: Apr 26 2024, 04:22 AM IST

ಮಹಿಳಾ ವೈದ್ಯರು ಚಿಕಿತ್ಸೆ ನೀಡಿದ ರೋಗಿ ಸಾಯುವ ಸಾಧ್ಯತೆ ಕಡಿಮೆ!
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷ ವೈದ್ಯರಿಗೆ ಹೋಲಿಸಿದರೆ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆಯಲ್ಪಟ್ಟ ರೋಗಿಗಳು ಸಾಯುವ ಸಾಧ್ಯತೆ ಕಡಿಮೆ ಎಂಬ ಅಚ್ಚರಿಯ ಅಂಶವೊಂದನ್ನು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ.

ನ್ಯೂಯಾರ್ಕ್‌: ಪುರುಷ ವೈದ್ಯರಿಗೆ ಹೋಲಿಸಿದರೆ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆಯಲ್ಪಟ್ಟ ರೋಗಿಗಳು ಸಾಯುವ ಸಾಧ್ಯತೆ ಕಡಿಮೆ ಎಂಬ ಅಚ್ಚರಿಯ ಅಂಶವೊಂದನ್ನು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ.ಅಮೆರಿಕದ ಲಾಸ್‌ ಏಂಜಲೀಸ್‌ನ ‘ಕ್ಯಾಲಿಫೋರ್ನಿಯಾ ವಿವಿ’ಯ ಡೇವಿಡ್‌ ಗೆಫ್ಪೆನ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನ ಡಾ. ಯುಸುಕೆ ಸುಗವಾ ನೇತೃತ್ವದ ತಂಡ ಇಂಥದ್ದೊಂದು ಅಧ್ಯಯನ ವರದಿ ಸಿದ್ಧಪಡಿಸಿದೆ. 2016-19ರ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 4.58 ಲಕ್ಷ ಪುರುಷ ಮತ್ತು 3.18 ಲಕ್ಷ ಮಹಿಳಾ ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿ ಸಿದ್ಧಪಡಿಸಲಾದ ಸಂಶೋಧನಾ ವರದಿಯನ್ನು ‘ಆನಲ್ಸ್‌ ಆಫ್‌ ಇಂಟರ್ನಲ್‌ ಮೆಡಿಸಿನ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ವರದಿಯಲ್ಲೇನಿದೆ?

ಸಂಶೋಧನಾ ವರದಿ ಅನ್ವಯ ಮಹಿಳಾ ರೋಗಿಗಳಿಗೆ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಗಳ ಸಾವಿನ ಪ್ರಮಾಣ ಶೇ.8.15ರಷ್ಟಿದ್ದರೆ, ಮಹಿಳಾ ರೋಗಿಗಳಿಗೆ ಪುರುಷ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಗಳ ಸಾವಿನ ಸಂಖ್ಯೆ ಶೇ.8.38 ರಷ್ಟಿತ್ತು.

ಇನ್ನೊಂದೆಡೆ ಪುರುಷ ರೋಗಿಗೆ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಯ ಸಾವಿನ ಪ್ರಮಾಣ ಶೇ.10.15ರಷ್ಟಿದ್ದರೆ, ಪುರುಷ ವೈದ್ಯರು ಚಿಕಿತ್ಸೆ ನೀಡಿದಾಗ ಸಾವಿನ ಪ್ರಮಾಣ ಶೇ.10.23ರಷ್ಟಿತ್ತು ಎಂದು ವರದಿ ವಿಶ್ಲೇಷಿಸಿದೆ.ಜೊತೆಗೆ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಮತ್ತೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕೂಡಾ ಕಡಿಮೆ ಎಂದು ವರದಿ ಹೇಲಿದೆ.

ಮಹಿಳೆಯರೇ ಏಕೆ ಬೆಸ್ಟ್‌?:

ಮಹಿಳಾ ವೈದ್ಯರು ಉತ್ತಮ ಗುಣಮಟ್ಟದ ಆರೈಕೆ ನೀಡುತ್ತಾರೆ. ರೋಗಿಗಳ ಜೊತೆ ಹೆಚ್ಚು ಸಂವಾದ ನಡೆಸುತ್ತಾರೆ. ಅವರು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಹೆಚ್ಚು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಚಿಕಿತ್ಸಾ ಪ್ರಕ್ರಿಯೆಯಲ್ಲಿ ಹೆಚ್ಚು ನಿಗಾ ವಹಿಸುತ್ತಾರೆ. ಮಹಿಳಾ ವೈದ್ಯರು ಹೆಚ್ಚು ಸಂವಹನ ಕೌಶಲ್ಯ ಹೊಂದಿರುತ್ತಾರೆ.

ಜೊತೆಗೆ ಮಹಿಳಾ ರೋಗಿಗಳ ವಿಷಯ ಬಂದಾಗ ಹೆಚ್ಚು ರೋಗಿಗಳ ಕೇಂದ್ರಿತವಾಗಿ ವರ್ತಿಸುತ್ತಾರೆ. ಮಹಿಳಾ ವೈದ್ಯರೇ ಚಿಕಿತ್ಸೆ ನೀಡುವುದು ಮಹಿಳಾ ರೋಗಿಗಳಿಗೆ ಕೆಲವೊಂದು ಮುಜುಗರ ತಪ್ಪಿಸುತ್ತದೆ. ಕೆಲವೊಂದು ಸೂಕ್ಷ್ಮ ತಪಾಸಣೆ ಬಳಿಕ ರೋಗಿಗಳು ಸಾಮಾಜಿಕವಾಗಿ ಎದುರಿಸಬೇಕಾದ ಕೆಲವೊಂದು ಸಮಸ್ಯೆಗಳನ್ನು ತಪ್ಪಿಸಿಕೊಳ್ಳುವುದು ಸುಲಭ ಸಾಧ್ಯ. ಇವೆಲ್ಲವೂ ಮಹಿಳಾ ವೈದ್ಯರು ಚಿಕಿತ್ಸೆ ನೀಡಿದಾಗ ರೋಗಿಗಳು ಸಾವನ್ನಪ್ಪುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೆಚ್ಚು ಮಹಿಳಾ ವೈದ್ಯರನ್ನು ಹೊಂದುವುದು ರೋಗಿಗಳ ದೃಷ್ಟಿಕೋನದಲ್ಲಿ ಹೆಚ್ಚು ಲಾಭಕರ ಎಂದು ವರದಿ ಹೇಳಿದೆ.2002ರಲ್ಲಿ ಪ್ರಕಟವಾಗಿದ್ದ ವರದಿಯೊಂದು, ಮಹಿಳಾ ವೈದ್ಯರು ಸರಾಸರಿ ರೋಗಿಯೊಬ್ಬನ ಜೊತೆ 23 ನಿಮಿಷ ಸಮಯ ಕಳೆದರೆ, ಪುರುಷ ವೈದ್ಯರು ಕಳೆಯುವ ಸಮಯ 21 ನಿಮಿಷ ಎಂದು ಹೇಳಿತ್ತು.

ಮಹಿಳಾ ವೈದ್ಯರಿಂದ ಚಿಕಿತ್ಸೆಶೇ.8.15

ಪುರುಷರ ವೈದ್ಯರಿಂದ ಚಿಕಿತ್ಸೆಶೇ.8.38

ಪುರುಷರಿಗೆ ಚಿಕಿತ್ಸೆಸಾವಿನ ಪ್ರಮಾಣ

ಮಹಿಳಾ ವೈದ್ಯರಿಂದ ಚಿಕಿತ್ಸೆಶೇ.10.15

ಪುರುಷರ ವೈದ್ಯರಿಂದ ಚಿಕಿತ್ಸೆಶೇ.10.23