ರಷ್ಯಾದಲ್ಲೂ ವಿಮಾನ ದುರಂತ : 49 ಸಾವು

| N/A | Published : Jul 25 2025, 12:31 AM IST / Updated: Jul 25 2025, 06:05 AM IST

ಸಾರಾಂಶ

ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಇದೀಗ ರಷ್ಯಾದಲ್ಲೂ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ 43 ಪ್ರಯಾಣಿಕರು ಸೇರಿ 49 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

 ಮಾಸ್ಕೋ: ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಇದೀಗ ರಷ್ಯಾದಲ್ಲೂ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ 43 ಪ್ರಯಾಣಿಕರು ಸೇರಿ 49 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸರ್ಬೀಯಾ ಮೂಲದ ಅಂಗಾರಾ ಏರ್‌ಲೈನ್ಸ್‌ಗೆ ಸೇರಿದ ಈ 50 ವರ್ಷಗಳಷ್ಟು ಹಳೆಯ ಎಎನ್‌-24 ವಿಮಾನ ರಷ್ಯಾದ ರಷ್ಯಾದ ಬ್ಲಾಗೋವೆಚೆಸ್ಕ್‌ನಿಂದ ರಷ್ಯಾ-ಚೀನಾ ಗಡಿಯಲ್ಲಿರುವ ಸರ್ಬಿಯಾದ ತೈಂಡಾ ನಗರದ ಕಡೆ ಪ್ರಯಾಣಿಸುತ್ತಿತ್ತು. ತೈಂಡಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಎರಡನೇ ಪ್ರಯತ್ನ ಮಾಡುವಾಗ ವಿಮಾನ ದಿಢೀರ್‌ ಪತನಗೊಂಡಿದೆ.

ವಿಮಾನ ಪತನದ ಬಳಿಕ ಭಾರೀ ಸ್ಫೋಟ ಆಗಿದ್ದು, ಇದರಲ್ಲಿದ್ದ ಐವರು ಮಕ್ಕಳು ಸೇರಿ 43 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದು 50 ವರ್ಷ ಹಳೆಯ ವಿಮಾನವಾಗಿದ್ದು, ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕೆಲವರು ಪ್ರತೀಕೂಲ ಹವಾಮಾನದಿಂದ ಈ ದುರಂತ ಸಂಭವಿಸಿದೆ ಎಂದರೆ, ಮತ್ತೆ ಕೆಲವರು ಎಂಜಿನ್‌ ವೈಫಲ್ಯದಿಂದ ವಿಮಾನ ಪತನವಾಗಿದೆ ಎಂದು ಹೇಳುತ್ತಿದ್ದಾರೆ. ಘಟನೆ ಕುರಿತು ಸರ್ಬಿಯಾ ಆಡಳಿತವು ತನಿಖೆಗೆ ಆದೇಶಿಸಿದೆ.

Read more Articles on