ಗಾಜಾದಲ್ಲಿ ಹೆಚ್ಚಿದ ಅವಧಿಪೂರ್ವ ಶಿಶು ಜನನ

| Published : Nov 10 2023, 01:01 AM IST / Updated: Nov 10 2023, 01:02 AM IST

ಸಾರಾಂಶ

ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವಂತೆಯೇ ಗಾಜಾಪಟ್ಟಿಯಲ್ಲಿ ಅವಧಿಪೂರ್ವ ಶಿಶು ಜನನ ಪ್ರಮಾಣ ಹೆಚ್ಚಾಗಿದೆ. ಅತಿ ಹೆಚ್ಚು ಜನರು ಸ್ಥಳಾಂತರವಾಗಿರುವುದರಿಂದ ಆಸ್ಪತ್ರೆಗಳಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ.

ಗಾಜಾ: ಯುದ್ಧದ ತೀವ್ರತೆ ಹೆಚ್ಚಾಗುತ್ತಿರುವಂತೆಯೇ ಗಾಜಾಪಟ್ಟಿಯಲ್ಲಿ ಅವಧಿಪೂರ್ವ ಶಿಶು ಜನನ ಪ್ರಮಾಣ ಹೆಚ್ಚಾಗಿದೆ. ಅತಿ ಹೆಚ್ಚು ಜನರು ಸ್ಥಳಾಂತರವಾಗಿರುವುದರಿಂದ ಆಸ್ಪತ್ರೆಗಳಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಅಲ್ಲದೇ ಶಿಶುಗಳ ಅಕಾಲಿಕ ಜನನ ಪ್ರಮಾಣ ಹೆಚ್ಚಳಕ್ಕೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ ದಾಳಿಯಿಂದ ರಕ್ಷಣೆಗಾಗಿ ಉತ್ತರ ಗಾಜಾದ ಜನರೆಲ್ಲ ದಕ್ಷಿಣ ಗಾಜಾ ಭಾಗಕ್ಕೆ ಬಂದು ನೆಲೆಸಿರುವುದರಿಂದ ದಕ್ಷಿಣ ಗಾಜಾದ ಆಸ್ಪತ್ರೆಗಳು ತುಂಬಿ ಹೋಗಿವೆ. ಹೀಗಾಗಿ ವಿದ್ಯುತ್‌ ಕಡಿತ, ಯಂತ್ರೋಪಜಕರಣಗಳ ಅಲಭ್ಯತೆ, ಔಷಧಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆ ಎದುರಾಗಿವೆ.