ಸಾರಾಂಶ
ರಡು ದಿನಗಳ ಕಾಲ ಫಿಜಿ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಫಿಜಿ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.
ಸುವಾ: ಎರಡು ದಿನಗಳ ಕಾಲ ಫಿಜಿ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಫಿಜಿ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.
ಫಿಜಿ ಅಧ್ಯಕ್ಷ ರತು ವಿಲಿಯಂ ಮೈವಲಿಲಿ ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಮುರ್ಮು ಅವರಿಗೆ ‘ಆಫ್ ದಿ ಆರ್ಡರ್ ಫಿಜಿ’ ಗೌರವ ಪ್ರಧಾನ ಮಾಡಿದರು. ಈ ವೇಳೆ ಮಾತನಾಡಿದ ಮುರ್ಮು, ಫಿಜಿಯನ್ನು ಸಧೃಡ ದೇಶವನ್ನಾಗಿ ಬಲ ಪಡಿಸಲು ಭಾರತವು ಬೆಂಬಲ ನೀಡುತ್ತದೆ’ ಎಂದರು. ಅಲ್ಲದೇ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದರು.