ಜೆನ್‌ ಝೀಗಳ ದಂಗೆಯಿಂದ ನಲುಗಿರುವ ನೇಪಾಳದಲ್ಲಿ ಮತ್ತೆ ಸಂಘರ್ಷದ ಕಿಡಿ ಹೊತ್ತಿಕೊಂಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಮುಸ್ಲಿಂ ಯುವಕರು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಡಿಯೋ ಪೋಸ್ಟ್‌ ಮಾಡಿದ ಬೆನ್ನಲ್ಲೇ, ದುಷ್ಕರ್ಮಿಗಳು ಮಸೀದಿಯೊಂದನ್ನು ನೆಲಸಮ ಮಾಡಿದ್ದಾರೆ.  

ಕಾಠ್ಮಂಡು: ಇತ್ತೀಚೆಗಷ್ಟೇ ಸರ್ಕಾರವನ್ನೇ ಉರುಳಿಸಿದ ಜೆನ್‌ ಝೀಗಳ ದಂಗೆಯಿಂದ ನಲುಗಿರುವ ನೇಪಾಳದಲ್ಲಿ ಮತ್ತೆ ಸಂಘರ್ಷದ ಕಿಡಿ ಹೊತ್ತಿಕೊಂಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಮುಸ್ಲಿಂ ಯುವಕರು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಡಿಯೋ ಪೋಸ್ಟ್‌ ಮಾಡಿದ ಬೆನ್ನಲ್ಲೇ, ದುಷ್ಕರ್ಮಿಗಳು ಮಸೀದಿಯೊಂದನ್ನು ನೆಲಸಮ ಮಾಡಿದ್ದಾರೆ. ಇದು ಹಿಂಸಾಚಾರಕ್ಕೆ ನಾಂದಿ ಹಾಡಿದೆ.

ಆಗಿದ್ದೇನು?:

ಧನುಷಾ ಜಿಲ್ಲೆಯ ಕಮಲಾ ಪುರಸಭೆಯ ಹೈದರ್ ಅನ್ಸಾರಿ ಮತ್ತು ಅಮಾನತ್ ಅನ್ಸಾರಿ ಎಂಬ ವ್ಯಕ್ತಿಗಳು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ವಿಡಿಯೋ ಪೋಸ್ಟ್‌ ಮಾಡಿದ್ದರು. ಇದನ್ನು ವಿರೋಧಿಸಿ ಹಿಂದೂಗಳು ಪ್ರತಿಭಟನೆ ಆರಂಭಿಸಿದ್ದಾರೆ. ತದನಂತರ ವಿಡಿಯೋ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದಾದ ಬೆನ್ನಲ್ಲೇ ಕಮಲಾ ಪ್ರದೇಶದಲ್ಲಿದ್ದ ಮಸೀದಿಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಶೀಘ್ರವೇ ಹಿಂಸಾಚಾರ ಆರಂಭವಾಗಿದ್ದು, ಉದ್ವಿಗ್ನರು ಬಿರ್ಗುಂಜ್‌ನ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ:

ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬಿರ್ಗುಂಜ್ ನಗರ ಹಾಗೂ ಸುತ್ತಮುತ್ತಲಿನ ನಾಗ್ವಾ-ಇನಾರ್ವಾ, ಸಿರ್ಸಿಯಾ ನದಿ, ಗಂಡಕ್ ಚೌಕ್, ಶಂಕರಾಚಾರ್ಯ ಗೇಟ್ ನಡುವಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಭಾರತದ ಗಡಿ ಬಂದ್:

ಭದ್ರತೆಯ ದೃಷ್ಟಿಯಿಂದ ಭಾರತ-ನೇಪಾಳ ಗಡಿಯನ್ನು ಭಾರತ ಸಂಪೂರ್ಣವಾಗಿ ಬಂದ್ ಮಾಡಿದೆ. ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.