ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಪ್ರಾಧ್ಯಾಪಕರು

| Published : Oct 10 2023, 01:00 AM IST

ಸಾರಾಂಶ

ತುಮಕೂರು:ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ನಾಗಭೂಷಣ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್‌. ಡಿ. ಈ ಹಿರಿಮೆಗೆ ಪಾತ್ರರಾಗಿರುವವರು.
ತುಮಕೂರು:ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ನಾಗಭೂಷಣ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್‌. ಡಿ. ಈ ಹಿರಿಮೆಗೆ ಪಾತ್ರರಾಗಿರುವವರು. ಅಂತರಾಷ್ಟ್ರೀಯವಾಗಿ ಪ್ರಕಟವಾದ ಸಂಶೋಧನ ಪ್ರಕಟಣೆಗಳು, ಉಲ್ಲೇಖಗಳು, ಸಹ-ಲೇಖಕ ಸಂಶೋಧನ ಪ್ರಕಟಣೆಗಳು ಮತ್ತು ಎಚ್-ಇಂಡೆಕ್ಸ್ ಗಳನ್ನು ಪರಿಶೀಲಿಸಿದ ನಂತರ ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ವಿಶ್ವದ ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು ಸೇರಿರುವುದು ವಿಶೇಷವಾಗಿದೆ.ಪ್ರಾಧ್ಯಾಪಕರ ಈ ಸಾಧನೆಗೆ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹಾಗೂ ಕುಲಸಚಿವೆ ನಾಹಿದಾ ಜಮ್ ಜಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ---- ಫೋಟೊ... ವಿಶ್ವಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ನಾಗಭೂಷಣ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ್‌. ಡಿ.