ರಷ್ಯಾ ಉಗ್ರ ದಾಳಿ ಹಿಂದೆ ಉಕ್ರೇನ್‌ ಕೈವಾಡ: ಪುಟಿನ್‌

| Published : Mar 24 2024, 01:33 AM IST

ರಷ್ಯಾ ಉಗ್ರ ದಾಳಿ ಹಿಂದೆ ಉಕ್ರೇನ್‌ ಕೈವಾಡ: ಪುಟಿನ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಸಭಾಂಗಣವೊಂದರ ಮೇಲೆ ನಡೆದ ಉಗ್ರ ದಾಳಿಯ ಹೊಣೆಯನ್ನು ಐಸಿಸ್‌ ಸಂಘಟನೆ ಹೊತ್ತುಕೊಂಡಿದ್ದರೂ ದಾಳಿಯ ಹಿಂದೆ ಉಕ್ರೇನ್‌ ಕೈವಾಡವಿರುವ ಸುಳಿವು ಲಭಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದಾರೆ.

ಮಾಸ್ಕೋ: ಇಲ್ಲಿನ ಸಭಾಂಗಣವೊಂದರ ಮೇಲೆ ನಡೆದ ಉಗ್ರ ದಾಳಿಯ ಹೊಣೆಯನ್ನು ಐಸಿಸ್‌ ಸಂಘಟನೆ ಹೊತ್ತುಕೊಂಡಿದ್ದರೂ ದಾಳಿಯ ಹಿಂದೆ ಉಕ್ರೇನ್‌ ಕೈವಾಡವಿರುವ ಸುಳಿವು ಲಭಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹೇಳಿದ್ದಾರೆ.ದಾಳಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ದೇಶವನ್ನು ಉದ್ದೇಶಿಸಿ ಟೀವಿ ಭಾಷಣ ಮಾಡಿದ ಅವರು, ‘ದಾಳಿಕೋರರ ಹೆಡೆಮುರಿ ಕಟ್ಟಿದ್ದೇವೆ. ದಾಳಿಕೋರರು ನೆರೆಯ ಉಕ್ರೇನ್‌ಗೆ ಪರಾರಿ ಆಗುವಾಗ ಎರಡೂ ದೇಶಗಳ ಗಡಿಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಕೃತ್ಯದ ಹಿಂದೆ ಉಕ್ರೇನ್‌ ಕೈವಾಡ ಇದೆ ಎಂಬ ಸಂದೇಹ ಉಂಟಾಗಿದೆ’ ಎಂದು ಹೇಳಿದರು.ಈಗಾಗಲೇ 2 ವರ್ಷದಿಂದ ರಷ್ಯಾ-ಉಕ್ರೇನ್‌ ಯುದ್ಧ ನಡೆಯುತ್ತಿದೆ. ಈಗ ಪುಟಿನ್‌ ಹಾಗೂ ರಷ್ಯಾದ ಅನೇಕ ರಾಜಕಾರಣಿಗಳು ಉಕ್ರೇನ್‌ ಮಲೆ ಅನುಮಾನ ವ್ಯಕ್ತಪಡಿಸಿರುವ ಕಾರಣ ಯುದ್ಧ ಮತ್ತಷ್ಟು ತೀವ್ರ ಆಗುತ್ತದೆಯೇ ಎಂಬ ಅನುಮಾನ ಮೂಡಿದೆ.