ಸಾರಾಂಶ
ಇರಾನ್ ಅಧ್ಯಕ್ಷ ಸಾವನ್ನಪ್ಪುವ ಮುನ್ನ ಹೆಲಿಕಾಪ್ಟರ್‌ನಲ್ಲಿ ಕುಳಿತಿರುವ ದೃಶ್ಯಗಳನ್ನು ಇರಾನ್ ಸರ್ಕಾರ ಬಿಡುಗಡೆ ಮಾಡಿದೆ.
ತೆಹ್ರಾನ್: ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ ಇರಾನ್ ಅಧ್ಯಕ್ಷ ಸೈದ್ ಇಬ್ರಾಹಿಂ ರೈಸಿ ಹೆಲಿಕಾಪ್ಟರ್‌ನಲ್ಲಿ ಕುಳಿತ ದೃಶ್ಯ ಬಿಡುಗಡೆ ಮಾಡಿದೆ. ಈ ಫೋಟೋಗಳು ವೈರಲ್ ಆಗಿವೆ.
ಅದರಲ್ಲಿ ರೈಸಿ ಹೆಲಿಕಾಪ್ಟರ್‌ನಲ್ಲಿ ಯಾವುದೇ ಚಿಂತೆ ಇಲ್ಲದೆ ಕುಳಿತಿರುವ ದೃಶ್ಯ ಸೆರೆಯಾಗಿದೆ. ಜೊತೆಗೆ ಹೆಲಿಕಾಪ್ಟರ್ ಅಜ಼ರ್‌ಬೈಜಾನ್ ಗಡಿಯ ಪರ್ವತ ಪ್ರದೇಶದಲ್ಲಿ ಭೂಪ್ರದೇಶದಿಂದ ಕೆಲವೇ ಅಡಿ ಎತ್ತರದಲ್ಲಿ ಅಮೆರಿಕ ನಿರ್ಮಿತ ಬೆಲ್ 212 ಕಾಪ್ಟರ್ ಸಂಚರಿಸುತ್ತಿರುವ ದೃಶ್ಯ ಕಾಣಬಹುದಾಗಿದೆ.
ರೈಸಿ ಹಾಗೂ ವಿದೇಶಾಂಗ ಸಚಿವ ಹೊಸೀನ್ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ.