ಸಾರಾಂಶ
ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ 2025ರ ಜನವರಿ ಬದಲು ಇದೇ ಜುಲೈ 4ರ ವೇಳೆಗೆ ಬ್ರಿಟನ್ ಮಹಾಚುನಾವಣೆ ನಡೆಯಲಿದೆ ಎಂದು ಬುಧವಾರ ಘೋಷಿಸಿದ್ದಾರೆ. ಈ ಮೂಲಕ ಅವಧಿಪೂರ್ವ ಚುನಾವಣೆ ಬಗ್ಗೆ ಎದ್ದಿದ್ದ ವದಂತಿಗೆ ತೆರೆ ಎಳೆದಿದ್ದಾರೆ.
ಸುನಕ್ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿದ್ದು, ಇತ್ತೀಚೆಗೆ ಬ್ರಿಟನ್ ಆರ್ಥಿಕ ಹಿಂಜರಿತದ ಕಾರಣ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರು. e
ಲೇಬರ್ ಪಕ್ಷವು ಅವರನ್ನು ಹಣಿಯಲು ಸರ್ವಸಿದ್ಧತೆ ಕೂಡ ನಡೆಸಿತ್ತು. ಆದರೆ ಸೋಮವಾರ ಬಿಡುಗಡೆ ಆದ ಅಂಕಿ ಅಂಶಗಳು ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಕಂಡಿದೆ ಎಂದು ಹೇಳಿದ್ದವು.
eeeeeಇದರ ಬೆನ್ನಲ್ಲೇ ಸುನಕ್ ಉತ್ಸಾಹಿತರಾಗಿದ್ದಾರೆ ಎನ್ನಲಾಗಿದ್ದು, ಅವಧಿಪೂರ್ವ ಚುನಾವಣೆ ಘೋಷಿಸಿದ್ದಾರೆ.ರಿಷಿ ಸುನಕ್ ಕರ್ನಾಟಕದ ಇಸ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಅವರ ಅಳಿಯನಾಗಿದ್ದು, ಹಿಂದಿನ ಪ್ರಧಾನಿ ಲಿಜ್ ಟ್ರಸ್ ಅವರು ರಾಜೀನಾಮೆ ನೀಡಿದ ಬಳಿ 2022ರ ಅಕ್ಟೋಬರ್‌ನಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದರು. ಇವರ ಅವಧಿಯಲ್ಲಿ ಬ್ರಿಟನ್ ಆರ್ಥಿಕತೆ ಸಾಕಷ್ಟು ಏರಿಳಿತ ಕಂಡಿದೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))