ಸಾರಾಂಶ
ಪುಟಿನ್ ಟೀಕಾಕಾರರಾಗಿದ್ದ ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಟೀಕಾಕಾರನಾಗಿದ್ದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಜೈಲಿನಲ್ಲೇ ಸಾವನ್ನಪ್ಪಿದ್ದಾರೆ.
19 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿ ಆರ್ಕ್ಟಿಕ್ ಜೈಲಿನಲ್ಲಿದ್ದ ಅಲೆಕ್ಸಿ ಶುಕ್ರವಾರ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ.ತಮ್ಮ ದೈನಂದಿನ ವಾಕಿಂಗ್ ಮುಗಿಸಿದ ಬಳಿಕ ಸ್ವಲ್ಪ ಆಯಾಸಗೊಂಡಿದ್ದ ಅಲೆಕ್ಸಿ ದಿಢೀರನೇ ಪ್ರಜ್ಞೆ ಕಳೆದುಕೊಂಡರು.
ಕೂಡಲೇ ವೈದ್ಯಕೀಯ ಸಿಬ್ಬಂದಿಗಳು ಧಾವಿಸಿ ಅಲೆಕ್ಸಿ ಅವರಿಗೆ ಚಿಕಿತ್ಸೆ ನೀಡಲಾರಂಭಿಸಿದರು.ಅದಾಗ್ಯೂ ಯಾವುದೇ ಪ್ರಯತ್ನಗಳು ಫಲಿಸದೇ ಅಲೆಕ್ಸಿ ಮೃತಪಟ್ಟರು ಎಂದು ರಷ್ಯಾ ಹೇಳಿದೆ.
ಅಲೆಕ್ಸಿ ಅವರು ಅಧ್ಯಕ್ಷ ಪುಟಿನ್‌ರನ್ನು ತೀವ್ರವಾಗಿ ವಿರೋಧಿಸುತ್ತಿದ್ದರು.