ಸಾರಾಂಶ
ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ ಅನ್ನು ವಿರೋಧಿಸುತ್ತಲೇ ಬಂದಿರುವ ಭಾರತ ಇದೀಗ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯಲ್ಲಿ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
ಇಸ್ಲಾಮಾಬಾದ್: ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ ಅನ್ನು ವಿರೋಧಿಸುತ್ತಲೇ ಬಂದಿರುವ ಭಾರತ ಇದೀಗ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯಲ್ಲಿ ತನ್ನ ಅಭಿಪ್ರಾಯವನ್ನು ಪುನರುಚ್ಚರಿಸಿದೆ.
ಶೃಂಗದ ಕೊನೆಯಲ್ಲಿ 8 ದೇಶಗಳು ಯೋಜನೆ ಬೆಂಬಲಿಸಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಿಂದ ಭಾರತ ದೂರ ಉಳಿದಿದೆ. ಈ ಯೋಜನೆಯಡಿ ಅನೇಕ ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿರುವುದನ್ನು ಉಲ್ಲೇಖಿಸಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಸಾಲ ಅತ್ಯಂತ ಕಳವಳಕಾರಿ. ವ್ಯಾಪಾರ ಮತ್ತು ಸಂಪರ್ಕ ಯೋಜನೆಗಳು ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌತೆಯನ್ನು ಗುರುತಿಸಬೇಕು. ಅಂತೆಯೇ ನಂಬಿಕೆಯ ಕೊರತೆಯ ಬಗ್ಗೆ ಪ್ರಾಮಾಣಿಕ ಮಾತುಕತೆ ಅಗತ್ಯ’ ಎನ್ನುವ ಮೂಲಕ ಪರೋಕ್ಷವಾಗಿ ಪಾಕ್ ಹಾಗೂ ಚೀನಾದ ಕಾಲೆಳೆದಿದ್ದಾರೆ.ಭಾರತದ ಈ ನಿಲುವಿಗೆ ಸವಾಲೊಡ್ಡಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ‘ಇಂತಹ ಯೋಜನೆಗಳನ್ನು ಸಂಕುಚಿತ ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಇವುಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಬೇಕು’ ಎಂದರು.