ಪಾಕ್‌ಗೆ ಶಹಬಾಜ್‌ ಷರೀಫ್‌ ನೂತನ ಪ್ರಧಾನ ಮಂತ್ರಿ

| Published : Feb 21 2024, 02:05 AM IST / Updated: Feb 21 2024, 07:52 AM IST

Pakistan New PM

ಸಾರಾಂಶ

ಭುಟ್ಟೋ ಪಕ್ಷದ ಆಸಿಫ್‌ ಪಾಕಿಸ್ತಾನದ ಮುಂದಿನ ಅಧ್ಯಕ್ಷರಾಗಲಿದ್ದು, ಶಹಬಾಜ್‌ ಷರೀಫ್‌ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಇಸ್ಲಾಮಾಬಾದ್‌: ಚುನಾವಣೆ ನಡೆದು ಹಲವು ಹಾವು ಏಣಿ- ಹಗ್ಗಜಗ್ಗಾಟದ ಬಳಿಕ ಕೊನೆಗೂ ಪ್ರಧಾನಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. 

ಮಾಜಿ ಸಚಿವ ಬಿಲಾವಲ್‌ ಭುಟ್ಟೋ ಅವರ ಪಿಪಿಪಿ ಪಕ್ಷ ಹಾಗೂ ಪಿಎಂಎಲ್‌-ಎನ್‌ ಪಕ್ಷ ಸರ್ಕಾರ ರಚನೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬಿಲಾವಲ್‌ ಭುಟ್ಟೋ ತಿಳಿಸಿದ್ದಾರೆ.

ಫೆ.8ರಂದು ಚುನಾವಣೆ ನಡೆದ ಬಳಿಕ ಪಾಕಿಸ್ತಾನ ಸೇನೆ ಆದೇಶದ ಮೇರೆಗೆ ಎರಡೂ ಪಕ್ಷಗಳು ಸರ್ಕಾರ ರಚನೆಗೆ ಹಲವು ಸುತ್ತಿನ ಮಾತುಕತೆ ನಡೆಸಿದವು. 

ಈ ಸಭೆಯಲ್ಲಿ ಮಾಜಿ ಪ್ರಧಾನಿ ನವಾಜ್‌ ಷರೀಫ್‌ 3 ವರ್ಷ, ಬಿಲಾವಲ್‌ ಭುಟ್ಟೋ 2 ವರ್ಷ ಪ್ರಧಾನಿ ಎಂಬ ಪ್ರಸ್ತಾಪ ಇತ್ತಾದರೂ ಇದಕ್ಕೆ ಒಮ್ಮತ ದೊರೆತಿರಲಿಲ್ಲ. 

ಮಂಗಳವಾರ ಸಭೆ ನಡೆಸಿದ ಎರಡೂ ಪಕ್ಷಗಳು ಶಹಬಾಜ್‌ ಷರೀಫ್‌ರನ್ನು ಪ್ರಧಾನಿಯನ್ನಾಗಿ ಮಾಡಿ, ದೇಶದ ಮುಂದಿನ ರಾಷ್ಟ್ರಪತಿಯನ್ನಾಗಿ ಪಿಪಿಪಿ ಪಕ್ಷದ ಆಸಿಫ್‌ ಜರ್ದಾರಿಯನ್ನು ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮಾಹಿತಿಯನ್ನು ಖುದ್ದು ಬಿಲಾವಲ್‌ ಭುಟ್ಟೋ ತಿಳಿಸಿದ್ದಾರೆ.