10 ದಿನಕ್ಕೆಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋದ ಸುನೀತಾ 2025ರಲ್ಲಿ ವಾಪಸ್?

| Published : Aug 09 2024, 12:45 AM IST / Updated: Aug 09 2024, 03:51 AM IST

ಸಾರಾಂಶ

ಹತ್ತು ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌, 2025ರ ಫೆಬ್ರುವರಿ ವೇಳೆಗಷ್ಟೇ ಭೂಮಿಗೆ ಮರಳುವ ಸಾಧ್ಯತೆ ಕುರಿತು ನಾಸಾ ಸುಳಿವು ನೀಡಿದೆ.

ವಾಷಿಂಗ್ಟನ್‌: ಹತ್ತು ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌, 2025ರ ಫೆಬ್ರುವರಿ ವೇಳೆಗಷ್ಟೇ ಭೂಮಿಗೆ ಮರಳುವ ಸಾಧ್ಯತೆ ಕುರಿತು ನಾಸಾ ಸುಳಿವು ನೀಡಿದೆ.

ಕಳೆದ ತಿಂಗಳು ಆ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದ್ದ ಬೋಯಿಂಗ್‌ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡು ಹೀಲಿಯಂ ಸೋರಿಕೆಯಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಭೂಮಿಗೆ ಮರಳಿ ಕರೆತರುವ ಯತ್ನಕ್ಕೆ ಬ್ರೇಕ್‌ ಬಿದ್ದಿದೆ.

ಈ ಸಂಬಂಧ ಬೋಯಿಂಗ್‌ ಜೊತೆಗೂಡಿ ಕೈಲಾದ ಪ್ರಯತ್ನ ಮಾಡುತ್ತಿರುವ ನಾಸಾ, ಎಲಾನ್‌ ಮಸ್ಕ್‌ರ ಸ್ಪೇಸ್‌ ಎಕ್ಸ್‌ನ ಡ್ರಾಗನ್‌ ಬಾಹ್ಯಾಕಾಶ ನೌಕೆಯಲ್ಲಿ ಅವರಿಬ್ಬರು 2025ರ ಫೆಬ್ರವರಿಯಲ್ಲಿ ಮರಳಬಹುದು ಎಂದಿದೆ.

ಇದು ಸುನಿತಾರ ಮೂರನೆ ಬಾಹ್ಯಾಕಾಶ ಯಾತ್ರೆಯಾಗಿದ್ದು, ಈ ವೇಳೆ ಗುರುತ್ವಾಕರ್ಷಣೆಯ ಬಲವನ್ನೂ ಮೀರಿ ಅಲ್ಲಿ ಗಿಡಗಳಿಗೆ ನೀರುಣಿಸುವ ಬಗೆಯನ್ನು ಕಂಡುಕೊಂಡಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.