ತೈವಾನ್‌ ಸ್ವಾತಂತ್ರ್ಯದ ಹೇಳಿಕೆಗೆಚೀನಾ ಕೆಂಡ, ರಕ್ತಪಾತ ಎಚ್ಚರಿಕೆ

| Published : May 24 2024, 12:53 AM IST / Updated: May 24 2024, 04:01 AM IST

ತೈವಾನ್‌ ಸ್ವಾತಂತ್ರ್ಯದ ಹೇಳಿಕೆಗೆಚೀನಾ ಕೆಂಡ, ರಕ್ತಪಾತ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತೈವಾನ್‌ನ ನೂತನ ಅಧ್ಯಕ್ಷ ಲಾಯ್‌ ಚಿಂಗ್‌ ಟೆ ಚೀನಿ ಸಾರ್ವಭೌಮತ್ವದ ಕುರಿತು ಆಕ್ಷೇಪವೆತ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬೆನ್ನಲ್ಲೇ ಸಿಟ್ಟಿಗೆದ್ದಿರುವ ಕಮ್ಯುನಿಸ್ಟ್‌ ಸರ್ಕಾರ, ತೈವಾನ್‌ ಸುತ್ತಲೂ ಭಾರೀ  ಸಮರಾಭ್ಯಾಸದ ಮೂಲಕ ದಿಗ್ಬಂಧನ ವಿಧಿಸಿದೆ.  

ಬೀಜಿಂಗ್‌/ತೈಪೆ: ತೈವಾನ್‌ನ ನೂತನ ಅಧ್ಯಕ್ಷ ಲಾಯ್‌ ಚಿಂಗ್‌ ಟೆ ಚೀನಿ ಸಾರ್ವಭೌಮತ್ವದ ಕುರಿತು ಆಕ್ಷೇಪವೆತ್ತಿ ಸ್ವಾತಂತ್ರ್ಯದ ಕುರಿತು ಮಾತನಾಡಿದ ಬೆನ್ನಲ್ಲೇ ಸಿಟ್ಟಿಗೆದ್ದಿರುವ ಕಮ್ಯುನಿಸ್ಟ್‌ ಸರ್ಕಾರ, ತೈವಾನ್‌ ಸುತ್ತಲೂ ಭಾರೀ ಪ್ರಮಾನದ ಸಮರಾಭ್ಯಾಸದ ಮೂಲಕ ದಿಗ್ಬಂಧನ ವಿಧಿಸಿದೆ. ಅಲ್ಲದೆ ಸ್ವಾತಂತ್ರ್ಯದ ಮಾತನಾಡುವವರಿಗೆ ರಕ್ತಪಾತದ ಎಚ್ಚರಿಕೆಯನ್ನೂ ರವಾನಿಸಿದೆ.

ಚೀನಾ ಸೇನೆ ತನ್ನ ಭೂ, ವಾಯು, ನೌಕಾಸೇನೆಯನ್ನು ಒಟ್ಟುಗೂಡಿಸಿ ತೈವಾನ್‌ ಜಲಸಂಧಿ, ತೈವಾನ್‌ ಉತ್ತರ, ದಕ್ಷಿಣ ಮತ್ತು ಪೂರ್ವ ಪ್ರದೇಶದ ಸಮುದ್ರದಲ್ಲಿ ಜಾಯಿಂಟ್‌ ಸ್ವಾರ್ಡ್‌ 2024-ಎ ಎಂಬ ಹೆಸರಿನಲ್ಲಿ ಸಮರಾಭ್ಯಾಸ ಆರಂಭಿಸಿದೆ. ಇದನ್ನು ಚೀನಾ ವಿದೇಶಾಂಗ ಮಂತ್ರಿಯು ‘ಶಿಕ್ಷಾ ಸಮರಾಭ್ಯಾಸ’ ಎಂಬುದಾಗಿ ಬಣ್ಣಿಸಿದ್ದು, ತಮ್ಮನ್ನು ಎದುರು ಹಾಕಿಕೊಂಡಲ್ಲಿ ತೈವಾನ್‌ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ತೋರಿಸುವ ಸಲುವಾಗಿ ಈ ಸಮರಾಭ್ಯಾಸವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ತೈವಾನ್‌ ಪ್ರತಿರೋಧ: ಸಮರಾಭ್ಯಾಸದ ಹೆಸರಿನಲ್ಲಿ ತನ್ನ ದೇಶದ ಕಡೆಗೆ ಬರುತ್ತಿದ್ದ ಚೀನಿ ಜೆಟ್‌ಗಳನ್ನು ನಿಗ್ರಹಿಸಲು ಹರಸಾಹಸ ಪಟ್ಟಿದ್ದು, ತನ್ನ ಕಡೆಯಿಂದಲೂ ಸಮರಾಭ್ಯಾಸದ ಹೆಸರಿನಲ್ಲಿ ಮಿಸೈಲ್‌ಗಳನ್ನು ಹಾರಿಸುವ ಮೂಲಕ ಪ್ರತಿರೋಧ ಒಡ್ಡಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ.