ಗೋವಾ 2 ದಿನ ಕಾಣೆ ಆಗುದ್ದ ನೇಪಾಳದ ಮೇಯರ್‌ ಮಗಳು ಪತ್ತೆ

| Published : Mar 28 2024, 12:46 AM IST

ಸಾರಾಂಶ

2 ದಿನದಿಂದ ನಾಪತ್ತೆ ಆಗಿದ್ದ ನೇಪಾಳದ ಮೇಯರ್‌ ಒಬ್ಬರ ಮಗಳು ಉತ್ತರ ಗೋವಾದ ಚೋಪ್ಡೆಮ್ ಗ್ರಾಮದಿಂದ 20 ಕಿಮೀ ದೂರದಲ್ಲಿರುವ ಹೋಟೆಲ್‌ನಲ್ಲಿ ಬುಧವಾರ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಜಿ: 2 ದಿನದಿಂದ ನಾಪತ್ತೆ ಆಗಿದ್ದ ನೇಪಾಳದ ಮೇಯರ್‌ ಒಬ್ಬರ ಮಗಳು ಉತ್ತರ ಗೋವಾದ ಚೋಪ್ಡೆಮ್ ಗ್ರಾಮದಿಂದ 20 ಕಿಮೀ ದೂರದಲ್ಲಿರುವ ಹೋಟೆಲ್‌ನಲ್ಲಿ ಬುಧವಾರ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಯರ್‌ ಮಗಳು ಆರತಿ ಹಮಾಲ್ ಮಾರ್ಚ್ 25 ರಂದು ನಾಪತ್ತೆಯಾಗಿದ್ದಳು. ಉತ್ತರ ಗೋವಾದ ಚೋಪ್ಡೆಮ್ ಗ್ರಾಮದಿಂದ 20 ಕಿಮೀ ದೂರದಲ್ಲಿರುವ ಹೋಟೆಲ್‌ನಲ್ಲಿ ಬುಧವಾರ ಪತ್ತೆಯಾಗಿದ್ದಾಳೆ.

ಆರತಿ ತಿಂಗಳ ಹಿಂದೆ ನೇಪಾಳದಿಂದ ಉತ್ತರ ಗೋವಾದ ಮಾಂಡ್ರೆಮ್ ಬಳಿಯ ಓಶೋ ಧ್ಯಾನ ಕೇಂದ್ರಕ್ಕೆ ಬಂದಿದ್ದಳು. ಅಲ್ಲಿಂದ ಅವಳು ನಾಪತ್ತೆಯಾಗಿದ್ದಳು. ಆಕೆ ಅಲ್ಲಿ ಫೋನ್‌ ಬಿಟ್ಟು ಹೋಟೆಲ್‌ಗೆ ತೆರಳಿದ್ದೇ ನಾಪತ್ತೆ ವದಂತಿಗೆ ನಾಂದಿ ಹಾಡಿತ್ತು. ಫೋನ್‌ ಬಿಟ್ಟು ಹೋಗಿದ್ದ ಕಾರಣ ಸುಲಭವಾಗಿ ಆಕೆಯ ಪತ್ತೆ ಸಾಧ್ಯ ಆಗಲಿಲ್ಲ,