ತಾಮ್ಮ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೇರಿದ ತೆರಿಗೆಯನ್ನು ಕೋರ್ಟ್ ಅಸಾಂವಿಧಾನಿಕ ಎಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಟ್ರಂಪ್, ‘ಸುಪ್ರೀಂನ ನಿರಾಶಾದಾಯಕ ತೀರ್ಪಿನಿಂದ ನಾಚಿಕೆಯಾಗಿದೆ.
ವಾಷಿಂಗ್ಟನ್: ತಾಮ್ಮ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೇರಿದ ತೆರಿಗೆಯನ್ನು ಕೋರ್ಟ್ ಅಸಾಂವಿಧಾನಿಕ ಎಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಟ್ರಂಪ್, ‘ಸುಪ್ರೀಂನ ನಿರಾಶಾದಾಯಕ ತೀರ್ಪಿನಿಂದ ನಾಚಿಕೆಯಾಗಿದೆ.
ವಿದೇಶಿ ಶಕ್ತಿಗಳ ಒತ್ತಾಯಕ್ಕೆ ಮಣಿದು ಹೊರಡಿಸಿರುವ ಆದೇಶ
ಇದು, ವಿದೇಶಿ ಶಕ್ತಿಗಳ ಒತ್ತಾಯಕ್ಕೆ ಮಣಿದು ಹೊರಡಿಸಿರುವ ಆದೇಶ’ ಎಂದು ಕಿಡಿ ಕಾರಿದ್ದಾರೆ. ಜತೆಗೆ, ಇದೇ ಹತಾಶೆಯಲ್ಲಿ, ‘ಎಲ್ಲಾ ದೇಶಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ತೆರಿಗೆ ವಿಧಿಸುತ್ತೇನೆ’ ಎಂದು ಘೋಷಿಸಿರುವ ಅವರು, ಭಾರತಕ್ಕೆ ಮಾತ್ರ ಇದರಿಂದ ವಿನಾಯಿತಿ ನೀಡಿದ್ದಾರೆ.
ತೆರಿಗೆ ವಿಧಿಸಲು ನನಗೆ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಯಿತು
ತೀರ್ಪಿನ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ, ‘ಸುಪ್ರೀಂ ಈಗ ತೆರಿಗೆ ವಿಧಿಸಲು ನನಗೆ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಯಿತು. ನನ್ನ ಬಳಿ ಪರ್ಯಾಯ ಆಯ್ಕೆಗಳಿವೆ. ಎಲ್ಲಾ ರಾಷ್ಟ್ರಗಳ ಮೇಲೆ ಹೇರಿರುವ ತೆರಿಗೆ ಮುಂದುವರೆಯಲಿದೆ. ಜತೆಗೆ, ಶೇ.10ರಷ್ಟು ಹೆಚ್ಚುವರಿ ಟ್ಯಾರಿಫ್ ವಿಧಿಸುತ್ತೇನೆ’ ಎಂದರು. ಇದೇ ವೇಳೆ, ‘ಮೋದಿ ಮಹಾನ್ ನಾಯಕ. ಅವರು ಎಲ್ಲರಿಗಿಂತ ಸ್ಮಾರ್ಟ್’ ಎಂದು ಹೊಗಳುತ್ತಾ, ‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಏನೂ ಬದಲಾಗದು. ಪ್ರಸ್ತುತ ಇರುವ ಶೇ.18ರಷ್ಟು ತೆರಿಗೆ ಮುಂದುವರೆಯಲಿದೆ’ ಎಂದರು.
