ಸಿಯೋಲ್‌: ದಕ್ಷಿಣ ಕೊರಿಯಾ ಅಧ್ಯಕ್ಷರ ಮನೆ ಮೇಲೆ ‘ಕಸದ ಬಲೂನ್’ ದಾಳಿ : ಅಪಾಯಕಾರಿ ವಸ್ತು ಇಲ್ಲ

| Published : Oct 25 2024, 01:06 AM IST / Updated: Oct 25 2024, 04:09 AM IST

ಸಾರಾಂಶ

‘ಇದು ಉತ್ತರ ಕೊರಿಯಾ ನಡೆಸಿರುವ ದಾಳಿ. ಆದರೆ ಬಲೂನ್‌ನಲ್ಲಿದ್ದ ಕಸದಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿಲ್ಲ’ ಎಂದು ದ. ಕೊರಿಯಾ ಅಧ್ಯಕ್ಷರ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಸಿಯೋಲ್‌: ‘ಇದು ಉತ್ತರ ಕೊರಿಯಾ ನಡೆಸಿರುವ ದಾಳಿ. ಆದರೆ ಬಲೂನ್‌ನಲ್ಲಿದ್ದ ಕಸದಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿಲ್ಲ’ ಎಂದು ದ. ಕೊರಿಯಾ ಅಧ್ಯಕ್ಷರ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಈ ಮೊದಲು ಜುಲೈನಲ್ಲೂ ಉತ್ತರ ಕೊರಿಯಾದ ಕಸ ತುಂಬಿದ ಬಲೂನ್ ಇಲ್ಲಿನ ಅಧ್ಯಕ್ಷರ ನಿವಾಸದ ಬಳಿ ಬಿದ್ದಿದ್ದು, ಯಾವುದೇ ಹಾನಿಯಾಗಿರಲಿಲ್ಲ. ಆದರೆ ಅಪಾಯಕಾರಿ ವಸ್ತು ಇರಿಸಿ ದಾಳಿ ನಡೆಸಲು ನಡೆಯುವ ತಾಲೀಮು ಇದು ಶಂಕಿಸಲಾಗಿದೆ. ಆದಾಗ್ಯೂ ಸರಿಯಾದ ಗುರಿಯಲ್ಲಿ ಬಲೂನ್‌ ಇಳಿಸುವ ತಂತ್ರಜ್ಞಾನ ಉತ್ತರ ಕೊರಿಯಾದ ಬಳಿ ಇಲ್ಲ ಎಂದು ಇದಕ್ಕೆ ತಜ್ಞರು ಹೇಳಿದ್ದಾರೆ.