ಸಾರಾಂಶ
ದೇಶೀಯ ಉದ್ಯಮಗಳ ಚೇತರಿಕೆ ಮತ್ತು ಉದ್ಯೋಗ ಸೃಷ್ಟಿಯ ಭಾಗವಾಗಿ ವಿಶ್ವದ ವಿವಿಧ ದೇಶಗಳ ಮೇಲೆ ಪ್ರತಿತೆರಿಗೆ ಹೇರುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ವಾಷಿಂಗ್ಟನ್: ದೇಶೀಯ ಉದ್ಯಮಗಳ ಚೇತರಿಕೆ ಮತ್ತು ಉದ್ಯೋಗ ಸೃಷ್ಟಿಯ ಭಾಗವಾಗಿ ವಿಶ್ವದ ವಿವಿಧ ದೇಶಗಳ ಮೇಲೆ ಪ್ರತಿತೆರಿಗೆ ಹೇರುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನನ್ನ ಆಪ್ತ ಸ್ನೇಹಿತ. ಆದರೆ ಅವರು ಅಮೆರಿಕವನ್ನು ಸೂಕ್ತವಾಗಿ ನೋಡಿಕೊಳ್ಳುತ್ತಿಲ್ಲ ಹೀಗಾಗಿ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.26ರಷ್ಟು ತೆರಿಗೆಯ ಘೋಷಣೆ ಮಾಡಿದ್ದಾರೆ.
ಭಾರತೀಯ ಕಾಲಮಾನ ಬುಧವಾರ ತಡರಾತ್ರಿ 2 ಗಂಟೆಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ದಶಕಗಳ ಕಾಲ ವಿದೇಶಗಳು ಅಮೆರಿಕದ ಸಂಪತ್ತನ್ನು ಬಳಸಿಕೊಂಡು ತಾವು ಶ್ರೀಮಂತವಾದವು. ಇದೀಗ ನಮ್ಮ ಸರದಿ. ನಮ್ಮ ಮೇಲೆ ಯಾವ ದೇಶಗಳ ಎಷ್ಟು ತೆರಿಗೆ ಹೇರುತ್ತವೋ ನಾವೂ ಆ ದೇಶಗಳ ಮೇಲೆ ಅಷ್ಟೇ ತೆರಿಗೆ ಹೇರಲಿದ್ದೇವೆ. ಮುಂದಿನ ದಿನಗಳ ಅಮೆರಿಕದ ಪಾಲಿಗೆ ಸ್ವರ್ಣಯುಗವಾಗಲಿದೆ ಎಂದು ಘೋಷಿಸಿದರು.
ಇದೇ ವೇಳೆ ಭಾರತ, ಕೆನಡಾ, ಜಪಾನ್, ಕೊರಿಯಾ, ವಿಯೆಟ್ನಾ ಸೇರಿದಂತೆ ಹಲವು ದೇಶಗಳು ಅಮೆರಿಕ ಉತ್ಪನ್ನಗಳ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರುತ್ತಿವೆ ಎಂದು ಟ್ರಂಪ್ ಕಿಡಿಕಾರಿದರು.
ಪ್ರಸ್ತುತ ಭಾರತದಲ್ಲಿ ಅಮೆರಿಕದ ವಸ್ತುಗಳ ಮೇಲೆ ಸರಾಸರಿ ಶೇ.77ರಷ್ಟು ತೆರಿಗೆ ಹೇರಲಾಗುತ್ತಿದ್ದು, ಭಾರತದ ಉತ್ಪನ್ನಗಳ ಮೇಲೆ ಅಮೆರಿಕದ ಶೇ.2.8ರಷ್ಟು ತೆರಿಗೆ ವಿಧಿಸುತ್ತಿದೆ. ಭಾರತ ಅಮೆರಿಕಕ್ಕೆ 30 ಕ್ಷೇತ್ರಗಳಿಗೆ ಸೇರಿದ ವಸ್ತುಗಳನ್ನು ರಫ್ತು ಮಾಡುತ್ತಿದೆ. ಇದರಲ್ಲಿ 6 ಕೃಷಿ ಸಂಬಂಧಿತವಾದರೆ, 24 ಕೈಗಾರಿಕೆಗೆ ಸಂಬಂಧಿಸಿದ್ದು.