ಆರ್ಥಿಕ ಬಲ ಪ್ರಯೋಗಿಸಿ ಅಮೆರಿಕದಲ್ಲಿ ಕೆನಡಾ ವಿಲೀನ: ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರ

| Published : Jan 09 2025, 12:45 AM IST / Updated: Jan 09 2025, 05:05 AM IST

ಆರ್ಥಿಕ ಬಲ ಪ್ರಯೋಗಿಸಿ ಅಮೆರಿಕದಲ್ಲಿ ಕೆನಡಾ ವಿಲೀನ: ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದ ಜೊತೆಗೆ ವಿಲೀನಕ್ಕೆ ಒಪ್ಪದ ಕೆನಡಾದ ವಿರುದ್ಧ ಆರ್ಥಿಕ ಬಲವನ್ನು ಪ್ರಯೋಗಿಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕದ ಜೊತೆಗೆ ವಿಲೀನಕ್ಕೆ ಒಪ್ಪದ ಕೆನಡಾದ ವಿರುದ್ಧ ಆರ್ಥಿಕ ಬಲವನ್ನು ಪ್ರಯೋಗಿಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಸಿದ್ದಾರೆ. ಅಮೆರಿಕದ ರಾಜ್ಯವನ್ನಾಗಿ ಕೆನಡಾವನ್ನು ವಿಲೀನಗೊಳಿಸಲು ಒಪ್ಪದ ಕೆನಡಾದ ವಿರುದ್ಧ ಮಿಲಿಟರಿ ಬಲವನ್ನು ಪ್ರಯೋಗಿಸುತ್ತೀರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ‘ಇಲ್ಲ‘ ಎಂದಿದ್ದಾರೆ.

 ‘ನಾನು ಆರ್ಥಿಕ ಬಲವನ್ನು ಪ್ರಯೋಗಿಸುತ್ತೇನೆ. ಇದು ರಾಷ್ಟ್ರೀಯ ಭದ್ರತೆಗೆ ಉತ್ತಮವಾಗಿರುತ್ತದೆ. ನಾವು ಕೆನಡಾವನ್ನು ರಕ್ಷಿಸುತ್ತೇವೆ ಎಂಬುದನ್ನು ಮರೆಯಬೇಡಿ’ ಎಂದಿದ್ದಾರೆ.

ಅಲ್ಲದೇ ಕೆನಡಾಗೆ ಯಾವುದೇ ಆರ್ಥಿಕ ಬೆಂಬಲವನ್ನು ನೀಡುವುದಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದು ‘ನಾನು ಕೆನಡಾದ ಜನರನ್ನು ಪ್ರೀತಿಸುತ್ತೇನೆ. ನಾವು ಅವರ ಭದ್ರತೆಗಾಗಿ ವರ್ಷಕ್ಕೆ ನೂರಾರು ಶತಕೋಟಿ ಖರ್ಚು ಮಾಡುತ್ತಿದ್ದೇವೆ. ಕೆನಡಾವನ್ನು ನೋಡಿಕೊಳ್ಳಲು ನಾವು ವರ್ಷಕ್ಕೆ ನೂರಾರು ಶತಕೋಟಿಗಳನ್ನು ಖರ್ಚು ಮಾಡುತ್ತಿದ್ದೇವೆ. ನಾವು ಬೃಹತ್‌ ಪ್ರಮಾಣದಲ್ಲಿ ವ್ಯಾಪಾರಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ನಮಗೆ ಅವರ ಕಾರುಗಳ ಅಗತ್ಯವಿಲ್ಲ. ಅವರ ಸೌದೆ ಅಗತ್ಯವಿಲ್ಲ. ಅವರ ಡೈರಿ ಉತ್ಪನ್ನಗಳು ಕೂಡ ನಮಗೆ ಬೇಕಿಲ್ಲ. ಮೂರ್ಖ ಜನರು ನಮಗೆ ನಿರ್ಬಂಧ ಹಾಕಿರುವುದರಿಂದ ನಾವು ಅವರನ್ನು ನಿರ್ಬಂಧಿಸಬೇಕು. ಅವರು ಬಳಿ ಇರುವ ಯಾವುದೂ ನಮಗೆ ಬೇಕಾಗಿಲ್ಲ. ಅವರಿಗಿಂತ ಹೆಚ್ಚು ನಮ್ಮ ಬಳಿ ಇದೆ. ನಮಗೇನೂ ಬೇಕಿಲ್ಲ’ ಎಂದಿದ್ದಾರೆ.